ಕಟೀಲಿನಲ್ಲಿ ಗಮಕ ಸಪ್ತಾಹ ಉದ್ಘಾಟನೆ
ಕಟೀಲು : ಹಿಂದೆ ಶಾಲೆಗಳಲ್ಲಿ ಕುಮಾರವ್ಯಾಸನ ಭಾರತ, ರಾಮಾಯಣ ಮುಂತಾದ ಕಾವ್ಯ ಪರಂಪರೆಯನ್ನು ತಿಳಿಸುವ ಕಲಿಸುವ ಕೆಲಸ ಆಗುತ್ತಿತ್ತು. ಮತ್ತೆ ಈ ಸಂಪ್ರದಾಯ ಮುಂದುವರಿಯಲಿ
ಎಂದು ಶಾರದಾ ವಿದ್ಯಾ ಸಂಸ್ಥೆಗಳ ಮುಖ್ಯಸ್ಥ ಎಂ. ಬಿ. ಪುರಾಣಿಕ್ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು ಮಂಗಳೂರು ತಾಲೂಕು ಘಟಕ ಅಧಿಕಸ್ಯ ಅಧಿಕಂ ಫಲಂ ಗಮಕ ಸಪ್ತಾಹ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಟೀಲು ದೇಗುಲದ ಅರ್ಚಕರಾದ ಲಕ್ಷ್ಮೀನಾರಾಯಣ ಅಸ್ರಣ್ಣ, ಅರ್ಚಕ ಕಮಲಾದೇವಿಪ್ರಸಾದ. ಅಸ್ರಣ್ಣ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ಗಮಕ ವಾಚನಕಾರ
ಯಜ್ಞೇಶ ಆಚಾರ್ಯ ಹೊಸಬೆಟ್ಟು, ವ್ಯಾಖ್ಯಾನಕಾರ ಪಶುಪತಿ ಶಾಸ್ತ್ರಿ, ಮತ್ತಿತರರಿದ್ದರು.
ಯಶೋದ ಕುಮಾರಿ ಸ್ವಾಗತಿಸಿದರು.
ಗಮಕ ಕಲಾ ಪರಿಷತ್ತು ಮಂಗಳೂರು ಘಟಕ ಅಧಿಕ ಮಾಸದಲ್ಲಿ ಶರವು ದೇವಸ್ಥಾನ, ಮಂಗಳಾದೇವಿ ದೇವಸ್ಥಾನ, ಕಟೀಲು ದೇವಸ್ಥಾನ, ಕುಡುಪು ದೇವಸ್ಥಾನಗಳಲ್ಲಿ ಒಂದು ತಿಂಗಳ ಕಾಲ ಗಮಕ ಸಪ್ತಾಹ ನಾಲ್ಕು ಕಡೆಗಳಲ್ಲಿ ನಡೆಯಲಿದೆ. ಕಟೀಲಿನಲ್ಲಿ ಶ್ರೀಮದ್ ಭಾಗವತದ ಕಥೆಗಳನ್ನು ಪ್ರಸ್ತುತಪಡಿಸಲಾಗುವುದು. ಅಲ್ಲದೆ ಈಗಾಗಲೇ 42 ಮನೆಗಳಲ್ಲಿ ಗಮಕ ವಾಚನ ನಡೆಸಿದ್ದೇವೆ ಎಂದು ಗಮಕ ಕಲಾ ಪರಿಷತ್ತು ಅಧ್ಯಕ್ಷ ಸುರೇಶ್ ರಾವ್ ಅತ್ತೂರು ಹೇಳಿದರು.