ಕಟೀಲಿನಲ್ಲಿ ದಾಸರ ಪದಗಳ ಗಾಯನ ತರಬೇತಿ
ಕಟೀಲು : ಏಕಾಗ್ರತೆಯಿಂದ ದೇವರ ಕುರಿತು ಚಿಂತನೆ ಮೂಡಿಸಲು ಸಂಗೀತವೂ ಒಂದು ಮಾರ್ಗವಾಗಿದೆ. ಈ ಸಂಗೀತ ಕ್ಷೇತ್ರಕ್ಕೆ ವಿಶೇಷ ಕೊಡುಗೆಯಾಗಿ ನೀಡಿದ ದಾಸರು ಸದಾ ಸ್ಮರಣೀಯರು. ಅವರ ಹಾಡುಗಳನ್ನು ಸರಿಯಾಗಿ ಕಲಿತು ಹಾಡುವ ಮೂಲಕ ದೇವರ ಅನುಗ್ರಹ ಪಡೆಯಬೇಕು.
ತಪ್ಪು ತಪ್ಪು ಸಾಹಿತ್ಯ ಹಾಡದೆ ಸರಿಯಾದ ರೀತಿಯಲ್ಲಿ ಹಾಡಿದಾಗ ಅಪಚಾರವಾಗುತ್ತದೆ ಎಂದು ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಅಸ್ರಣ್ಣ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಸಮೂಹ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಆಯೋಜಿಸಿದ ದಾಸರ ಪದಗಳ ಗಾಯನ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ಸಂಗೀತ ಶಿಕ್ಷಕಿ ಶ್ರೀಮತಿ ಸುಶ್ರಾವ್ಯ ಅಸ್ರಣ್ಣ, ದೇಗುಲದ ಅರ್ಚಕ ಶ್ರೀಕರ ಅಸ್ರಣ್ಣ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಕುಸುಮಾವತಿ, ಗಿರೀಶ್ ತಂತ್ರಿ, ದಯಾನಂದ ಮಾಡ ಮತ್ತಿತರರಿದ್ದರು. ಉಪನ್ಯಾಸಕಿ ಶೈಲಜಾ ನಿರೂಪಿಸಿದರು.