ಡಿಕೆಶಿ ಯವರಿಗೆ ಒಳಿತಾಗಲಿ ಕಟೀಲಿನಲ್ಲಿ ವಿಶೇಷ ರಂಗಪೂಜೆ
ಕಟೀಲು:ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಲಯ ಕಾಂಗ್ರೆಸ್ ಸಮಿತಿಯ ವತಿಯಿಂದ ಭಾನುವಾರದಂದು ರಾತ್ರಿ ಪುರಾಣ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸನ್ಮಾನ್ಯ ಡಿ. ಕೆ. ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿ, ಉತ್ತಮವಾದ ಅಭಿವೃದ್ಧಿ ಕೆಲಸ ಮಾಡುವಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಜನಪರ ಆಡಳಿತ ನೀಡುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷದ ಮುಖಂಡರ ನೇತೃತ್ವದಲ್ಲಿ ಕಟೀಲು ಶ್ರೀ ದೇವಿಗೆ ಪ್ರಿಯವಾದ "ರಂಗ ಪೂಜೆ" ಸೇವೆಯು ನೆರವೇರಿತು.
ಈ ಸಂದರ್ಭದಲ್ಲಿ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮೋಹನ್ ಕೋಟ್ಯಾನ್, ಕೆಪಿಸಿಸಿ ಸದಸ್ಯ ವಸಂತ್ ಬೆರ್ನಾರ್ಡ್, ಸಹಕಾರ ರತ್ನ ಮೋನಪ್ಪ ಶೆಟ್ಟಿ ಎಕ್ಕಾರು , ಕಾಂಗ್ರೆಸ್ ಮುಖಂಡರಾದ ಸಂಜೀವ ಮಡಿವಾಳ, ನವೀನ್ ಕುಮಾರ್ ಕಟೀಲ್, ತಿಮ್ಮಪ್ಪ ಕೋಟ್ಯಾನ್, ಅನಿಲ್ ಪೂಜಾರಿ ಸಸಿಹಿತ್ಲು, ಸಂತೋಷ್ ಕೋಟ್ಯಾನ್ ಕೊಪ್ಪಳ, ಪವನ್ ಶೆಟ್ಟಿಗಾರ್, ಸಂತೋಷ್ ಕುಮಾರ್, ಶರತ್ ಕಾರ್ನಾಡ್, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸದಸ್ಯರಾದ ಪ್ರಕಾಶ್ ಕಿನ್ನಿಗೋಳಿ, ಕೋಕಿಲ ಅಮೀನ್, ಚಂದ್ರ ರಾಣ್ಯ, ಸಂತಾನ್ ಡಿ"ಸೋಜಾ, ಮುಲ್ಕಿ ನಗರ ಪಂಚಾಯತ್ ಸದಸ್ಯ ಯೋಗೀಶ್ ಕೋಟ್ಯಾನ್, ಮುಲ್ಕಿ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಸುನಿಲ್ ಸೆಕ್ವೇರಾ, ಸುಭಾಸ್ ಚಂದ್ರ (ಸುಬ್ಬು) ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.