ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯಿಂದ ಪ್ರತಿಭಾ ಗೌರವ
ಹಳೆಯಂಗಡಿ : ಹಳೆಯಂಗಡಿಯ ಪ್ರತಿಷ್ಠಿತ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ವತಿಯಿಂದ 2025-26 ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಶೇಕಡ 85 ಹಾಗೂ ಮೇಲ್ಪಟ್ಟು ಅಂಕ ಗಳಿಸಿ ತೇರ್ಗಡೆಗೊಂಡ ಸೊಸೈಟಿಯ ಸದಸ್ಯರ ಮಕ್ಕಳನ್ನು ಗೌರವಿಸುವ ಕಾರ್ಯಕ್ರಮವು ಸೊಸೈಟಿಯ ಮಹಾಸಭೆಯ ದಿನದಂದು (ಆಗಸ್ಟ್ 8) ನಡೆಯಲಿದೆ. ಅರ್ಹ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ ಮತ್ತು ಭಾವಚಿತ್ರದೊಂದಿಗೆ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಎಲ್ಲಾ ಶಾಖೆ ಹಾಗೂ ಸೊಸೈಟಿಯ ಅಧಿಕೃತ ವೆಬ್ ಸೈಟ್ www.priyadarshinisociety.com ನಲ್ಲಿ ಲಭ್ಯವಿರುವ ಅರ್ಜಿಯನ್ನು ಪಡೆದುಕೊಂಡು ದಿನಾಂಕ 31/07/2026 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಇದರ ಪ್ರಯೋಜನವನ್ನು ಪಡೆಯುವಂತೆ ಪ್ರಿಯದರ್ಶಿನಿ ಕೋ ಅಪರೇಟಿವ್ ಸೊಸೈಟಿಯ ಅಧ್ಯಕ್ಷ ಹೆಚ್ ವಸಂತ್ ಬೆರ್ನಾರ್ಡ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.