Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ವಾಮಂಜೂರು ಜಂಕ್ಷನ್ ಬಳಿ ಎನ್‍ಎಚ್ ತೋಡಿನಲ್ಲಿ ಗಲೀಜು ನೀರು ,ಸ್ಥಳೀಯರಿಗೆ ತಕ್ಷಣ ನೋಟೀಸು ಜಾರಿ ಭರವಸೆ ನೀಡಿದ ಡಾ. ಭರತ್ ಶೆಟ್ಟಿ

ಕೈಕಂಬ  : ಮಂಗಳೂರು - ಮೂಡಬಿದಿರೆ ರಾಷ್ಟ್ರೀಯ ಹೆದ್ದಾರಿಯು ಚತುಷ್ಪಥವಾಗಿ ವಿಸ್ತರಣೆಗೊಳ್ಳುತ್ತಿದ್ದು, ರಾಷ್ಟ್ರೀಯ ಹೆದ್ದಾರಿ 169ರ ವಾಮಂಜೂರು ಜಂಕ್ಷನ್‍ನ  ಸಮೀಪದ ಚರಂಡಿಗೆ  ಅಪಾರ್ಟ್‍ಮೆಂಟ್, ಅಂಗಡಿ-ಮುಂಗಟ್ಟು, ಮನೆಗಳ ಕೊಳಚೆ ನೀರು ಹರಿಯುತ್ತಿದ್ದು,ಚರಂಡಿಗೆ ನೀರು   ಬಿಡುತ್ತಿರುವವರ ವಿರುದ್ಧ ಮಂಗಳೂರು ಮಹಾನಗರ ಪಾಲಿಕೆ ಮೂಲಕ ತಕ್ಷಣ ನೊಟೀಸು ಜಾರಿಗೊಳಿಸಿ ಕ್ರಮಕ್ಕೆ ಸೂಚನೆ ನೀಡಲಾಗುವುದು  ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ  ಶಾಸಕ ಡಾ. ಭರತ್ ಶೆಟ್ಟಿ ಅವರು ಸ್ಥಳಿಯರಿಗೆ ಭರವಸೆ ನೀಡಿದರು. ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಡಾ.ಭರತ್ ಶೆಟ್ಟಿ ಯವರು ಪರಿಶೀಲನೆ ನಡೆಸಿದ್ದಾರೆ. 
ಭಾರೀ ಪ್ರಮಾಣದಲ್ಲಿ ಕೊಳಚೆ ನೀರನ್ನು ಮಳೆ ನೀರು ಹರಿದುಹೋಗುವ ಚರಂಡಿಗೆ ಬಿಡಲಾಗುತ್ತಿದ್ದು,ಪರಿಸರದಲ್ಲಿ  ದಿನವಿಡಿ ದುರ್ವಾಸನೆ ಹಾಗೂ ಸೊಳ್ಳೆ ಕಾಟದಿಂದ ತೊಂದರೆಯಾಗಿದೆ.ಈ ಬಗ್ಗೆ ಅಪಾರ್ಟ್ ಮೆಂಟ್ ವಿರುದ್ದ ಕ್ರಮ ವಹಿಸಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಈ  ಸಂದರ್ಭದಲ್ಲಿ ಮಂಗಳೂರು ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಪ್ರಮುಖರಾದ ಉಮೇಶ್, ರವಿರಾಜ್, ರಘು ಸಾಲ್ಯಾನ್, ಶೇಖರ ಪೂಜಾರಿ, ಕಿಶೋರ್ ಹಾಗೂ ಸ್ಥಳೀಯ ನಿವಾಸಿಗರು ಇದ್ದರು.