ಶ್ರೀ ರಾಮ ಯುವಕ ವೃಂದ (ರಿ.), ಗೋಳಿಜೋರ ಇದರ ನೂತನ ಕಟ್ಟಡದ ನಿರ್ಮಾಣಕ್ಕೆ ಶಂಕುಸ್ಥಾಪನೆ
ಕಿನ್ನಿಗೋಳಿ : ಶ್ರೀ ರಾಮ ಯುವಕ ವೃಂದ (ರಿ.), ಗೋಳಿಜೋರ ಇದರ ನೂತನ ಕಟ್ಟಡದ ನಿರ್ಮಾಣಕ್ಕೆ ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಸಂಘದ ಗೌರವಾಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ ಶಂಕುಸ್ಥಾಪನೆ ನೆರವೇರಿಸಿದರು. ಕೊಡೆತ್ತೂರು ವೇದವ್ಯಾಸ ಉಡುಪ ರವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿತು.
ಈ ಸಂದರ್ಭ ಸಂಘದ ಅಧ್ಯಕ್ಷ ಶಯನ್ ಶೆಟ್ಟಿಗಾರ್ ಕುಜಿಂಗಿರಿ, ಸಂಘದ ಗೌರವ ಸಲಹೆಗಾರರಾದ ಸುಧಾಕರ್ ಶೆಟ್ಟಿ ಸಂಪಿಗೆ, ಡಾ. ಸರಳಾ ಕುಂದರ್, ಮೋಹನ್ ಕೋಟ್ಯಾನ್, ಶ್ರೀಮತಿ ಸುನಿತಾ ರೋಡ್ರಿಗಸ್, ಪ್ರಕಾಶ್ ಆಚಾರ್ಯ, ಶಂಕರ್ ಮಾಸ್ಟರ್ ಗೊಳಿಜೋರ, ಶ್ರೀಮತಿ ಪದ್ಮಿನಿ ವಸಂತ, ಗಂಗಾಧರ್ ಡಿ ಶೆಟ್ಟಿಗಾರ್, ರಿಜ್ವಾನ್ ಅಹಮ್ಮದ್, ಶ್ರೀಮತಿ ಜೂಲಿಯಾನಾ ಬಾರ್ಬೋಜಾ, ರಘು ಗೊಳಿಜೋರ, ಪ್ರಕಾಶ್ ಶೆಟ್ಟಿಗಾರ್, ವಿಕ್ರಂ ಶೆಟ್ಟಿ, ಮಾಧವ ಮುಕ್ಕಾಲ್ತಿ, ಜಿಯಾವುದ್ದೀನ್ ಪುನರೂರು ಯಶವಂತ ಶೆಟ್ಟಿಗಾರ್ , ಸಂಘದ ಸರ್ವಸದಸ್ಯರುಗಳು ಉಪಸ್ಥಿತರಿದ್ದರು.
ಈ ವೇಳೆ ಶ್ರೀ ರಾಮ ಯುವಕ ವೃಂದದ ವತಿಯಿಂದ ಅಂಗನವಾಡಿ ಮಕ್ಕಳಿಗೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ಪುಸ್ತಕಗಳನ್ನು ವಿತರಿಸಲಾಯಿತು.