Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಳುವಾರು ಪ್ರಾಥಮಿಕ ಆಂಗ್ಲಮಾಧ್ಯಮ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

ಬಜಪೆ:ಕಳುವಾರು ಪ್ರಾಥಮಿಕ ಆಂಗ್ಲಮಾಧ್ಯಮ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ವರ್ಷದ  ಶಾಲಾ ಪ್ರಾರಂಭೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಹೊಸ ಶೈಕ್ಷಣಿಕ ವರ್ಷದ ಆರಂಭದ ಅಂಗವಾಗಿ ಶಿಕ್ಷಕಿಯರು ಶಾಲೆಗೆ ಆಗಮಿಸಿದ ಮಕ್ಕಳಿಗೆ ಹೂ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ  ವಿದ್ಯಾರ್ಥಿಗಳು ಶಿಕ್ಷಣ,  ಕುರಿತು ವಿವಿಧ ಘೋಷಣೆಗಳನ್ನು ಕೂಗಿ ಎಲ್ಲರಲ್ಲೂ ಉತ್ಸಾಹ ಮೂಡಿಸಿದರು.ನಂತರ ಟ್ರಸ್ಟ್‌ನ ಸದಸ್ಯರು ಶಾಲೆಯ ಸ್ಥಾಪಕರಾದ ಶ್ರೀ ಸುಬ್ಬರಾವ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. 

 ಈ ಸಂದರ್ಭ   ಟ್ರಸ್ಟ್ ನ ಕಾರ್ಯದರ್ಶಿ ಲಕ್ಷ್ಮೀಶ ರಾವ್, ಉಪಾಧ್ಯಕ್ಷ  ಬಿ.ರಾಘವ ಸನಿಲ್ , ಕೋಶಾಧಿಕಾರಿ ಬಿ. ರವೀಂದ್ರ ರಾವ್, ಶಾಲಾ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ  ಗಂಗಾಧರ ಪೂಜಾರಿ  ಮೊದಲಾದವರು ಉಪಸ್ಥಿತರಿದ್ದರು.ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ಸ್ವಾಗತಿಸಿದರು. 
ಕಾರ್ಯಕ್ರಮದಲ್ಲಿಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೊಷಕರು ಸಂತೋಷದಿಂದ ಪಾಲ್ಗೊಂಡಿದ್ದರು.