Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಸುಂಕದಕಟ್ಟೆ ಅಂಗನವಾಡಿ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ

ಬಜಪೆ:ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳಂಬೆ ಗ್ರಾಮದ ಸುಂಕದಕಟ್ಟೆಯ ಕೊಸ್ವಾ ಲೇಔಟ್‌ನಲ್ಲಿ 2024-25ನೇ ಸಾಲಿನ ಅಂಗನವಾಡಿ ಕಟ್ಟಡಗಳ ನಿರ್ಮಾಣ ಕ್ರಿಯಾಯೋಜನೆ ಹಾಗೂ ನರೇಗಾ ಒಗ್ಗೂಡಿಸುವಿಕೆಯಡಿ ಮಂಜೂರಾದ ₹20 ಲಕ್ಷ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಸುಂಕದಕಟ್ಟೆ ಅಂಗನವಾಡಿ ನೂತನ ಕಟ್ಟಡದ ಗುದ್ದಲಿ ಪೂಜೆಯನ್ನು  ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿಯವರು ನೆರವೇರಿಸಿ ಮಾತನಾಡಿ ಅಂಗನವಾಡಿ ಕಟ್ಟಡದ ನಿರ್ಮಾಣವು ಮಕ್ಕಳ ಶೈಕ್ಷಣಿಕ ಹಾಗೂ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿ ಎಂದರು.
 ಈ ಸಂದರ್ಭ ಪಂಚಾಯತ್ ಅಭಿವೃದ್ಧಿ ಅಧಿಕಾರಿ  ಸೌಮ್ಯ, ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ  ಶೈಲಾ ಕೆ. ಕಾರಿಗಿ, ಮೇಲ್ಪಾಚಾರಕಿ ಸೀತಾ ಕೆ., ಪಂಚಾಯತ್ ಮಾಜಿ ಅಧ್ಯಕ್ಷ ಉಮೇಶ್ ಮೂಲ್ಯ, ಮಾಜಿ ಉಪಾಧ್ಯಕ್ಷ ಉದಯ ಆರ್. ರಾವ್, ಮಾಜಿ ಸದಸ್ಯರಾದ ಸುನೀತಾ, ಸವಿತಾ ಶಾಲಿನಿ, ವಿಜಯ ದೇವು, ವಿಮಲ, ಸೆಲಿನ್ ಫೆರ್ನಾಂಡಿಸ್ , ವಿಜಯ ಸುವರ್ಣ, 
ಗಂಜಿಮಠ ಮಹಾಶಕ್ತಿಕೇಂದ್ರದ ಅಧ್ಯಕ್ಷ ಶೋಧನ್ ಅದ್ಯಪಾಡಿ, ಪ್ರಮುಖರಾದ ಅಮೃತ್ ಲಾಲ್, ಜೋಯ್ಸ್ ಡಿ'ಸೋಜಾ, ವಿಶ್ವ ಶೆಟ್ಟಿ, ಶಿವಾನಂದ ಕರ್ಕೇರ, ಅಂಗನವಾಡಿ ಕಾರ್ಯಕರ್ತೆ ಸೌಮ್ಯ ಹಾಗೂ  ಗ್ರಾಮಸ್ಥರು ಇದ್ದರು.