Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಎಂ ಅರ್ ಪಿ ಎಲ್ ಕಾರ್ಗೊ ಗೇಟ್ - ಚರ್ಚ್ ರೋಡ್ ಬಳಿ ಸುಸಜ್ಜಿತ ಪ್ರಯಾಣಿಕರ ತಂಗುದಾಣ ನಿರ್ಮಿಸಿಕೊಡಲು ಕಾಟಿಪಳ್ಳ ಲಯನ್ಸ್ ಕ್ಲಬ್ ನಿಂದ ಎಂ ಅರ್ ಪಿ ಎಲ್ ಗೆ ಮನವಿ

ಬಜಪೆ : ಕಾಟಿಪಳ್ಳ ಚರ್ಚ್ ರೋಡ್ ಬಳಿ ಈ ಮೊದಲು ಪ್ರಯಾಣಿಕರ ತಂಗುದಾಣವಿದ್ದು , ಕಳೆದ 10 ವರ್ಷಗಳ ಹಿಂದೆ ಐ ಎಸ್ ಪಿ ಅರ್ ಎಲ್ ಪೈಪ್ ಲೈನ್ ಅಳವಡಿಸುವ ವೇಳೆ ಈ ಬಸ್ ನಿಲ್ದಾಣವನ್ನು ಕೆಡವಿರುತ್ತಾರೆ. ಆ ಬಳಿಕ ಇದುವರೆಗೆ ಅಲ್ಲಿ ಹೊಸ ಬಸ್ ನಿಲ್ದಾಣ ನಿರ್ಮಿಸಿರುವುದಿಲ್ಲ.
     ಅಲ್ಲದೆ ದೇಶದಲ್ಲೇ ಗಮನ ಸೆಳೆವ ಎಂ ಅರ್ ಪಿ ಎಲ್ ಸಂಸ್ಥೆಯ ಪ್ರಧಾನ ಪ್ರವೇಶ ದ್ವಾರ ಕಾರ್ಗೊ ಗೇಟ್ ಇದರ ಪಕ್ಕದಲ್ಲೇ ಇದೆ. 
 ದಿನೇ ದಿನೇ ಬೆಳೆಯುತ್ತಿರುವ ಈ ಪರಿಸರದಲ್ಲಿ ತಂಗುದಾಣ ಇಲ್ಲದೆ ಸಾರ್ವಜನಿಕರು ಕಷ್ಟ ಪಡುವ ಸ್ಥಿತಿ ಎದುರಾಗಿದೆ.
   ಆದ್ದರಿಂದ ಈ ಪರಿಸರದಲ್ಲಿ ಅತೀ ಶೀಘ್ರದಲ್ಲಿ ಒಂದು ಸುಸಜ್ಜಿತ ಪ್ರಯಾಣಿಕರ ತಂಗುದಾಣ ನಿರ್ಮಿಸಿ, ಪ್ರಯಾಣಿಕರಿಗೆ ಅನುಕೂಲ ಮಾಡಿ ಕೊಡುವಂತೆ ಕಾಟಿಪಳ್ಳ - ಕೃಷ್ಣಾಪುರ ಲಯನ್ಸ್ ಕ್ಲಬ್ ಪರವಾಗಿ, ಕ್ಲಬ್ ನ ನಿಯೋಜಿತ ಅಧ್ಯಕ್ಷ  ಪಿ. ದಯಕರ ಸುವರ್ಣ ಅವರು ಎಂ ಅರ್ ಪಿ ಎಲ್  ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ.