Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಬಡಗ ಎಕ್ಕಾರು ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ತು ಹಾಗೂ ವಿವಿಧ ಸಂಘಗಳ ಉದ್ಘಾಟನೆ

ಬಜಪೆ  :"ಭಾರತದ ಪ್ರಜಾಪ್ರಭುತ್ವ ಬಲಗೊಳ್ಳಲು ಬೇಕಾಗಿರುವುದು ಕೇವಲ ವಿಷಯ ಜ್ಞಾನವಲ್ಲ, ನೈಜ ಶಿಕ್ಷಣ!" ಎಂಬ ಗಾಂಧೀಜಿಯವರ ಆಶಯದಂತೆ ಪ್ರೌಢಶಾಲಾ ಹಂತದಲ್ಲೇ ವಿದ್ಯಾರ್ಥಿಗಳಲ್ಲಿ ಜೀವನಾನುಭವ ಕಟ್ಟಿಕೊಡುವ ಶಾಲಾ ಸಂಸತ್ತು ಮತ್ತು ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮವು   ಬಡಗ ಎಕ್ಕಾರು ಸರಕಾರಿ  ಪ್ರೌಢಶಾಲೆಯಲ್ಲಿ ನಡೆಯಿತು.

ಮಂಗಳೂರು ವಿಶ್ವ ವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಹಾಗೂ ಸೈಬರ್ ಸೆಕ್ಯುರಿಟಿ  ವಿಭಾಗದ ಮುಖ್ಯಸ್ಥ ಹಾಗೂ ಸಹಾಯಕ ಪ್ರಾಧ್ಯಾಪಕ  ನವೀನಚಂದ್ರ ಕುಮಾರ್   ಶಾಲಾ ಸಂಸತ್ ನ್ನು ಶಾಲಾ ಸಂಸತ್ ಮುಖ್ಯ ಮಂತ್ರಿ ರಾಷ್ಟ್ರ ಮಟ್ಟದ ನೆಟ್ ಬಾಲ್ ಆಟಗಾರ್ತಿ ಮೌಲ್ಯ ಆರ್. ಶೆಟ್ಟಿ ಇವಳಿಗೆ ಅನುಮೋದಿತಗೊಂಡ ಸಂಸತ್ ಸದಸ್ಯರ ಪಟ್ಟಿಯನ್ನು  ಹಸ್ತಾಂತರ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ   
ವಿದ್ಯಾರ್ಥಿಗಳು ಭವಿಷ್ಯದ ನಿರ್ಮತೃಗಳು. ಅವರಲ್ಲಿ ಇಂದು ಬಿತ್ತುವ ಜ್ಞಾನದ ಬೀಜ ಮುಂದೆ ಸಮಾಜಕ್ಕೆ ಉಪಯುಕ್ತವೆನಿಸುವ ವ್ಯಕ್ತಿತ್ವ ರೂಪಿಸಿಕೊಡುವ ಶಕ್ತಿಯಾಗಿರಬೇಕು ಎಂದರು.

ವಿವಿಧ ಸಂಘಗಳ ನಾಯಕರಿಗೆ ಸಹಕಾರ ರತ್ನ ಮೋನಪ್ಪ ಶೆಟ್ಟಿ ಎಕ್ಕಾರು  ಕಡತ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು 

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ  ಸಮಿತಿ ಅಧ್ಯಕ್ಷ  ಸುದೀಪ್  ಅರ್ ಅಮೀನ್  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಒಗ್ಗಟ್ಟಿನ ಪರಿಶ್ರಮವೇ ಶಾಲೆಯ ಯಶಸ್ಸಿಗೆ  ಕಾರಣ  ಎಂದರು.  



ಜಗಿತ್ತಿನಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತದ ಭಾವೀ ನಾಯಕರನ್ನು ಬೆಳೆಸುವ ಸಮರ್ಥ ವೇದಿಕೆಯಾದ ವಿದ್ಯಾರ್ಥಿ ಸಂಸತ್ತು ಪ್ರತಿಯೊಬ್ಬರಿಗೂ ಪ್ರಶ್ನಿಸುವ - ಉತ್ತರಿಸುವ ಅರ್ಹತೆ ಗಳಿಸಿಕೊಡುತ್ತದೆ. ಸಣ್ಣ ವಿಚಾರಗಳಿಗೆ ದೊಡ್ಡ ದನಿ ತುಂಬುತ್ತಾ ಸಂಚಲನ ಒದಗಿಸುವ ಕಲೆ ವಿದ್ಯಾರ್ಥಿಗಳಿಗೆ ಕರಗತವಾಗಿದ್ದಕ್ಕೆ ಸರ್ಕಾರಿ ಪ್ರೌಢಶಾಲೆ ಬಡಗ ಎಕ್ಕಾರಿನಲ್ಲಿ ನಡೆದ ಶಾಲಾ ಸಂಸತ್ತು ಸಾಕ್ಷಿಯಾಯಿತು. ಅನುಭವೀ ನಾಯಕರಂತೆ ಚರ್ಚೆ - ವಿಧೇಯಕ ಮಂಡನೆ ಮತ್ತು ನ್ಯಾಯಯುತ ಹೋರಾಟದ ಹಂತಗಳನ್ನು ವಿದ್ಯಾರ್ಥಿಗಳು ದಿಟ್ಟವಾಗಿ ನಿರ್ವಹಿಸಿ ತಮ್ಮ ಕಿರಿಯರಿಗೆ ಸ್ಫೂರ್ತಿಯಾದರು. 

ಶಾಲಾ  ಮುಖ್ಯ ಶಿಕ್ಷಕಿ ಇಂದಿರಾ ಎನ್. ರಾವ್ ವಿದ್ಯಾರ್ಥಿ ಸಂಸತ್ ನ ಸಭಾಪತಿ, ಶಾಲಾ ಸಂಸತ್ತಿನ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.ಮತದಾರರ ಸಾಕ್ಷರತಾ ಸಂಘದ ನೋಡಲ್ ಶಿಕ್ಷಕ  ಚಿತ್ರಾಶ್ರೀ ಕೆ. ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಸ್ಟ್ಯಾನಿ ಮಿರಾಂದ ಸಿಹಿ ತಿಂಡಿ ವ್ಯವಸ್ಥೆ ಮಾಡಿದ್ದರು.ಹಿರಿಯ ಶಿಕ್ಷಕಿ  ಪೂರ್ಣಿಮಾ ,ಶಿಕ್ಷಕಿಯರಾದ  ವಿದ್ಯಾಗೌರಿ, ವಿನ್ನಿ ನಿರ್ಮಲ ಡಿಸೋಜ, ರಾಜಶ್ರೀ, ವಿದ್ಯಾಲತಾ ಕಾರ್ಯಕ್ರಮದ ಆಯೋಜನೆಯಲ್ಲಿ ಸಹಕರಿಸಿದರು.
ಡಾ. ಅನಿತ್ ಕುಮಾರ್ ಸ್ವಾಗತಿಸಿದರು.ರಮ್ಯಾ ಕೆ ವಂದಿಸಿ,  ಜ್ಯೋತಿ ಬಿ ನಿರೂಪಿಸಿದರು.


ಶಾಲಾ ಸಂಸತ್  , ಮಂತ್ರಿಮಂಡಲ ರಚನೆ   ಕಾರ್ಯ ವೈಖರಿ ಬಗ್ಗೆ :


ಪ್ಲಾಸ್ಟಿಕ್ ಬಳಕೆಯ ಕಾರಣದಿಂದ ವಾತಾವರಣ ಮಲಿನ ಗೊಂಡು ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ  ಹಾಗೂ ಕ್ಯಾನ್ಸರ್ ನಂತಹ ಅಪಾಯಕಾರಿ ಅನಾರೋಗ್ಯ ಸ್ಥಿತಿಗೆ  ಪ್ಲಾಸ್ಟಿಕ್ ಬಳಕೆ ಕಾರಣವಾಗಿದ್ದು ಈ ಬಗ್ಗೆ ಎಚ್ಚೆತ್ತ ವಿದ್ಯಾರ್ಥಿ ಮುಖಂಡರು ಶಾಲಾ ಆವರಣದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಸೇರಿದಂತೆ ಎಲ್ಲಾ ಬಗೆಯ ಪ್ಲಾಸ್ಟಿಕ್ ಕಸ ಎಸೆಯುವುದನ್ನು ನಿಲ್ಲಿಸಲು ದೃಢ ನಿರ್ಧಾರ ಮಾಡಿದರು. ಪ್ಲಾಸ್ಟಿಕ್ ಬಳಕೆ ನಿಲ್ಲಿಸಲು ಮತ್ತು ಪರ್ಯಾಯ ವಸ್ತುಗಳನ್ನು ಬಳಸಲು ಎಲ್ಲಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕ ಅಂಶಗಳನ್ನು ಸದನದ ಒದಗಿಸಿ ಜಾಗೃತಿ ಮೂಡಿಸಿ  ಪರಿಸರ ಸಚಿವ  ಪಂಚಮ್ ಕೋಟ್ಯಾನ್  ಪ್ಲಾಸ್ಟಿಕ್ ಮುಕ್ತ ಶಾಲಾ ಪರಿಸರ ವಿಧೇಯಕ-2026’ ನ್ನು  ಮಂಡಿಸಿ ಸರ್ವವಾನು ಮತದಿಂದ ಅಂಗೀಕಾರ ಗೊಂಡಿತು.


ಅಕ್ಷರ ದಾಸೋಹದ ಉನ್ನತ ಆಶಯದ ಮನದಟ್ಟು ಮಾಡಿಕೊಡುವ ಜೊತೆಗೆ ಆಹಾರದ ತಯಾರಿಕೆ - ಊಟದ ನಂತರ ಉಳಿಯುವ ತರಕಾರಿ ಸಿಪ್ಪೆ, ಮೊಟ್ಟೆಯ ಹೊರ ಕವಚ ಮುಂತಾದ ಹಸಿ ಕಸದ ನಿರ್ವಹಣೆ ವಿಚಾರದಲ್ಲಿ ವಿರೋಧ ಪಕ್ಷದ ಸದಸ್ಯೆ  ವಿದ್ಯಾ, 8ನೇ ತರಗತಿ ಎತ್ತಿದ ಪ್ರಶ್ನೆಗೆ ಸೂಕ್ತ ಉತ್ತರ ನೀಡಲು ತಡಬಡಾಯಿಸಿದ ಆಹಾರ ಮಂತ್ರಿ ನಂದೀಶ್, 10ನೇ ತರಗತಿ ಇವರ ನಿರ್ಲಕ್ಷ್ಯ ಧೋರಣೆ ಕಂಡು ರೋಸಿಹೋದ ಸಭಾಪತಿ ಅಪ್ಸನಾ ಬಾನು, 10ನೇ ತರಗತಿ ತಮ್ಮ ತಿಳುವಳಿಕೆಯ ಮಾತುಗಳ ಮೂಲಕ ಸರಕಾರದ ಕಿವಿ ಹಿಂಡಿದರು


ಶೂನ್ಯ ವೇಳೆಯಲ್ಲಿ ಆರಂಭವಾದ ಚರ್ಚೆಯಲ್ಲಿ  ಶಾಲೆಯ ಎದುರು ರಸ್ತೆ ಬದಿಯಲ್ಲಿ ಕೆಸರು ನೀರು ನಿಲ್ಲುತ್ತಿರುವ ಮತ್ತು ಅದರಿಂದ ಉಂಟಾಗುತ್ತಿರುವ ಸಮಸ್ಯೆಗಳ ಚರ್ಚೆಗೆ ಅಚ್ಚರಿಯ ತಿರುವು ದೊರೆತು. ಸರಕಾರವು ರಸ್ತೆ ಮಾಡುವ ಮೊದಲು ಒಳ ಚರಂಡಿಯನ್ನು ಸರಿಯಾಗಿ ನಿರ್ವಹಿಸಬೇಕು ಒಂದು ವೇಳೆ ಈ ವ್ಯವಸ್ಥೆ ಸರಿಯಾಗಿ ನಿರ್ವಹಿಸದೆ ಹೋದಲ್ಲಿ ರಸ್ತೆಯೇ ಚರಂಡಿಯಾಗುವುದು ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ಮಳೆಗಾಲಕ್ಕೆ ಸರಕಾರವು ದೋಣಿಯ ವ್ಯವಸ್ಥೆಯನ್ನು ಮಾಡಲಿ ಎಂದು ವಿರೋಧ ಪಕ್ಷದ ಸದಸ್ಯೆ ಕಿಂಜಲ್, 9ನೇ ತರಗತಿ ತಮ್ಮ ವಿಡಂಬನೆಯ ಮಾತಿನಿಂದ ಸರಕಾರವನ್ನು ಚುಚ್ಚಿದರು. ಸೂಕ್ತ ಪರಿಹಾರ ಕ್ರಮ ಕೈಗೊಳ್ಳಲು ಮನ ಮಾಡದ ಗೃಹ ಸಚಿವರ ಅಸಮರ್ಥತೆಗೆ ಧಿಕ್ಕಾರ ಸೂಚಿಸಿದ ಸಾನ್ವಿ, 10ನೇ ತರಗತಿ ಇವರ ದಿಟ್ಟ ಧ್ವನಿಗೆ ತಮ್ಮ ಆಕ್ರೋಶ ಸೇರಿಸಿ ಕೋಲಾಹಲ ನಡೆಸಿದ ಪ್ರತಿ ಪಕ್ಷದ ನಾಯಕ  ಯಜ್ಞೇಶ್‌, 10ನೇ ತರಗತಿ,ಮತ್ತು ಸದಸ್ಯರು ಸದನದ ಬಾವಿಗಿಳಿದು ಗೃಹ ಮಂತ್ರಿ ಭವಿತ್  ರಾಜೀನಾಮೆಗೆ ಆಗ್ರಹಿಸಿದ್ದು ಅಚ್ಚರಿಯ ಬೆಳವಣಿಗೆಯಾಗಿತ್ತು. ಮಾರ್ಷಲ್ ಗಳಾದ ಪ್ರಣೀತ್ ಹಾಗೂ ಸಂಕೇತ್ ಶೆಟ್ಟಿಗಾರ್ ಸಹಾಯದಿಂದ ಪ್ರತಿಪಕ್ಷದ ಸದಸ್ಯರನ್ನು ತಡೆಯಲಾಯಿತು. ಕಿರಿಯ ವಿದ್ಯಾರ್ಥಿಗಳು ಸದನದ ಕಲಾಪದಲ್ಲಿ ಏನೆಲ್ಲಾ ನಡೆಯುತ್ತದೆ ಎಂದು ಆಚ್ಚರಿಯ ಕಣ್ಣುಗಳಿಂದ ವೀಕ್ಷಿಸಿದರು.

ಸದನ ಆರಂಭಕ್ಕೂ ಮುನ್ನ ಕಾಶ್ಮೀರದಲ್ಲಿ ಹಿಮಪಾತದಲ್ಲಿ ಮಡಿದ ಯೋಧರಿಗೆ ಸಂತಾಪ ಸೂಚಿಸಲಾಯಿತು. 

ಶಾಲಾ ಸಂಸತ್ತಿಗೆ ನೂತನವಾಗಿ ಆಯ್ಕೆಯಾದ ಸ್ವಚ್ಛತಾ ಮಂತ್ರಿ ಪಂಚಮ್ ಕೋಟ್ಯಾನ್ ಗೆ   ಸಭಾಪತಿ ಪ್ರಮಾಣ ವಚನ ಬೋಧಿಸಿದರು. ಶಾಲಾ ನಿಯಮಗಳಿಗೆ ಬದ್ಧರಾಗಿ ಕರ್ತವ್ಯಗಳಲ್ಲಿ ತೊಡಗಿಕೊಳ್ಳುವುದಾಗಿ ದೇವರ ಹೆಸರಿನಲ್ಲಿ ಮಂತ್ರಿಗಳು ಪ್ರಮಾಣವಚನ ಸ್ವೀಕರಿಸಿಸರು.


ವಿದ್ಯಾರ್ಥಿಗಳ ಆರ್ಥಿಕ ಸಮಸ್ಯೆಗಳು ಅವರನ್ನು ಶಿಕ್ಷಣದಿಂದ ವಿಮುಖರನ್ನಾಗಿ ಮಾಡಬಾರದೆಂದು ಭಾವಿಸಿ ಜಾರಿಗೆ ತರಲಾದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣದ ವ್ಯವಸ್ಥೆಯನ್ನು ಮತ್ತು ಅದರ ಹಿಂದಿರುವ ಶಿಕ್ಷಣ ಪರ ಕಾಳಜಿಯನ್ನು ಗುರುತಿಸಿ ಪ್ರತಿಪಕ್ಷದ ಸದಸ್ಯೆ ವರ್ಷ, 10ನೇ ತರಗತಿ ರಾಜಕೀಯ ವಿರೋಧ ಮರೆತು  ಶ್ಲಾಘಸಿದ್ದನ್ನು ಗಮನಿಸಿದ ಸಭಾಪತಿಗಳು ಆದರ್ಶ ಸಂಸತ್ ಕನಸಲ್ಲ. ಅದು ಪ್ರತಿಪಕ್ಷದ ಇಂತಹಾ ನಡೆಗಳಿಂದ ಮತ್ತು ಧನಾತ್ಮಕ ಧೋರಣೆಯಳಿಂದ ನನಸಾಗುತ್ತದೆ ಎಂದು ಶ್ಲಾಘಿಸಿದರು.


ಬಡಗ ಎಕ್ಕಾರು ಪ್ರೌಢಶಾಲೆಯಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳು ಪತ್ರಿಕೆಗಳಲ್ಲಿ ಹಾಗೂ ಸುದ್ದಿ ಮಧ್ಯಮಗಳಲ್ಲಿ ಸಚಿತ್ರವಾಗಿ ಪ್ರಕಟವಾಗಿ ಜನರ ಮನ ಸೆಳೆದ ಕಾರಣ ಶಾಲಾ ದಾಖಲಾತಿ ಹೆಚ್ಚಿದೆ. ಸರ್ಕಾರಿ ಶಾಲೆಯೊಂದು ವಿದ್ಯಾರ್ಥಿಗಳ ಸಾಧನೆಯ ಛಲ ಮತ್ತು ಶಿಕ್ಷಕರ ಶ್ರಮದ ಫಲವಾಗಿ ಊರಿನವರ ಪ್ರೀತಿ ಗಳಿಸಿ ಬೆಳೆಯುತ್ತಿರುವ ಈ ಹಂತದಲ್ಲಿ ಮಾಧ್ಯಮ ರಂಗದ ಸಹಾಯ ಹಸ್ತ ಶಾಲೆಯ ಪ್ರತಿ ಹೆಜ್ಜೆಗೂ ಸ್ಫೂರ್ತಿಯ ಬೆಳಕು ಚೆಲ್ಲಿದ್ದನ್ನು ಗುರುತಿಸುತ್ತ ಪ್ರತಿಫಕ್ಷದ ಸದಸ್ಯೆ  ತನ್ವಿ, ವಾರ್ತಾ ಮತ್ತು ಪ್ರಚಾರ ಖಾತೆ ಸಚಿವರನ್ನು ಅಭಿನಂದಿಸಿದರು. ಅಭಿನಂದನೆಗಳನ್ನು ಸಂತೋಷದಿಂದ ಸ್ವೀಕರಿಸಿದ ವಾರ್ತಾ ಮತ್ತು ಪ್ರಚಾರ ಖಾತೆ ಸಚಿವೆ ಸಾನ್ವಿ, 9ನೇ ತರಗತಿ ಹಾಗೂ ಮುಖ್ಯಮಂತ್ರಿ ಮೌಲ್ಯ ಆರ್. ಶೆಟ್ಟಿ ವಿರೋಧ ಪಕ್ಷದ ಧನಾತ್ಮಕ ನುಡಿಗಳಿಗೆ ಧನ್ಯವಾದ ಸಮರ್ಪಿಸಿದರು. ಶಾಲಾ ಸಂಸತ್ತು ಶಾಲೆಯ ಶಿಕ್ಷಕರ ಯಶಸ್ವೀ ಮಾರ್ಗದರ್ಶನ ಮತ್ತು ವಿದ್ಯಾರ್ಥಿಗಳ ಒಗ್ಗಟ್ಟಿನ ಶ್ರಮವನ್ನು ಸ್ಮರಿಸಿ ಶ್ಲಾಘಿಸಿದರು.

 ಶಾಲಾ ಮಂತ್ರಿ ಮಂಡಲ - 2026-27 : 


ಸಭಾಪತಿಯಾಗಿ ಅಪ್ಸಾನ ಬಾನು, 10ನೇ ತರಗತಿ,ಶಾಲಾ ಮುಖ್ಯಮಂತ್ರಿಯಾಗಿ ಮೌಲ್ಯ ಆರ್.‌ ಶೆಟ್ಟಿ., ಗೃಹ ಮಂತ್ರಿಯಾಗಿ ಭವಿತ್, 10ನೇ ತರಗತಿ,ಪರಿಸರ ಹಾಗೂ ಸ್ವಚ್ಚತಾ ಮಂತ್ರಿಯಾಗಿ  ಪಂಚಮ್ ಕೋಟ್ಯಾನ್ , 9ನೇ ತರಗತಿ‌,ನೀರಾವರಿ ಮಂತ್ರಿಯಾಗಿ ಗೌತಮ್,10ನೇ ತರಗತಿ, ನಿವೇದ್‌ ಕುಮಾರ್, 8ನೇ ತರಗತಿ,ಆರೋಗ್ಯ ಮಂತ್ರಿಯಾಗಿ ನೂತನ್, 8ನೇ ತರಗತಿ,ತೋಟಗಾರಿಕಾ ಮಂತ್ರಿಯಾಗಿ ಆದೀಶ್, 9ನೇ ತರಗತಿ, ಶಿಕ್ಷಣ ಮಂತ್ರಿಯಾಗಿ ಸಿಯಾನ್‌ ಜಸ್ಟಿನ್‌ ಮಿರಾಂದ, 9ನೇ ತರಗತಿ,ಸಾಂಸ್ಕೃತಿಕ ಮಂತ್ರಿಯಾಗಿ ಸಾನ್ವಿಕ, 10ನೇ ತರಗತಿ,ಕ್ರೀಡಾ ಮಂತ್ರಿಯಾಗಿ ನಿತೇಶ್, 10ನೇ ತರಗತಿ,ಆಹಾರ ಮಂತ್ರಿಯಾಗಿ ನಂದೀಶ್, 10ನೇ ತರಗತಿ,ಅಖಿಲ್,ವಾರ್ತಾ ಮತ್ತು ಪ್ರಚಾರ ಇಲಾಖೆ ಸಚಿವರಾಗಿ ಸಾನ್ವಿ 9ನೇ ತರಗತಿ,ಉಪ ಮಂತ್ರಿಗಳಾಗಿ ತನ್ವಿತ್ ,ಸುದಿನ್, ಅನಿತಾ, ಸಾನ್ವಿ, ತ್ರಿಷಾ 8ನೇ ತರಗತಿ,10ನೇ ತರಗತಿ ಶಾಲಾ ಸಂಸತ್ತಿನ ಆಡಳಿತ ಪಕ್ಷದವರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾದರು.

ವಿರೋಧ ಪಕ್ಷದ ನಾಯಕನಾಗಿ ಯಜ್ಞೇಶ್‌, 10ನೇ ತರಗತಿ, ವಿರೋಧ ಪಕ್ಷದ ಸದಸ್ಯರಾಗಿ ಶ್ರಾವಣಿ, ಅದ್ವಿತಾ,ಪ್ರಣೀಲ್ 8ನೇ ತರಗತಿ, ವಾಸುದೇವ,ವರ್ಷ, ರಿಷಿಕಾ, ವರ್ಷ ಎಸ್, ಖುಷಿ, ಸಾನಿಕ, ರುತ್ ಮರಿಯಾ,ಸಾನ್ವಿ,ಜಾಹ್ನವಿ 10ನೇ ತರಗತಿ, ಕಿಂಜಲ್, ದಿಗಂತ್ ಪಿ. ಸಾಲ್ಯಾನ್,ವಿದ್ಯಾ,ಲಾವಣ್ಯ,ಸಿಂಚನಾ,ತೇಜಲ್,ಧೃತಿ 9ನೇ ತರಗತಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದರು.

ಮಾರ್ಷಲ್ ಗಳಾಗಿ 
ಸಂಕೇತ್‌ ಶೆಟ್ಟಿಗಾರ್ ,10ನೇ ತರಗತಿ‌  ಹಾಗೂ ಪ್ರಣೀತ್,10ನೇ ತರಗತಿ‌ ಕಾರ್ಯ ನಿರ್ವಹಿಸಿದರು.
ಸದನದ ಕಾರ್ಯದರ್ಶಿಯಾಗಿ ಆಡಳಿತಾತ್ಮಕ ಜವಾಬ್ದಾರಿಯನ್ನು ಹೊತ್ತ ವೈ ಸುಹಾಸ್ ಭಟ್ ಸಭೆಯ ಆಯೋಜನೆಯಲ್ಲಿ ಯಶಸ್ವಿಯಾಗಿ ಸಹಕರಿಸಿದರು.