Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಲಯನ್ಸ್ ಕ್ಲಬ್ ವಲಯ ಅಧ್ಯಕ್ಷರಾಗಿ ದೀಪಕ್ ಪೆರ್ಮುದೆ ನೇಮಕ

ಬಜಪೆ : ಲಯನ್ಸ್ ಕ್ಲಬ್ ಕಾಟಿಪಳ್ಳ - ಕೃಷ್ಣಾಪುರ ದ ಮಾಜಿ ಅಧ್ಯಕ್ಷ ಹಾಗೂ  ಪೆರ್ಮುದೆ ಗ್ರಾಮ ಪಂಚಾಯತ್ ನ  ಮಾಜಿ ಸದಸ್ಯ ದೀಪಕ್ ಪೆರ್ಮುದೆಯವರನ್ನು 2026- 27 ರ ಸಾಲಿಗೆ ಲಯನ್ಸ್ ಜಿಲ್ಲೆ 317ಡಿ ಪ್ರಾಂತ್ಯ 9 ವಲಯ 1 ರ ವಲಯ ಅಧ್ಯಕ್ಷರನ್ನಾಗಿ ಲಯನ್ಸ್ ಜಿಲ್ಲಾ ರಾಜ್ಯಪಾಲ ಎಚ್.ಎಂ.ತಾರಾನಾಥ ಕೊಪ್ಪರವರು ನೇಮಕಗೊಳಿಸಿದ್ದಾರೆ.
 ಲಯನ್ಸ್ ಜಿಲ್ಲೆ 317 ಡಿ ಪ್ರಾಂತ್ಯ 9 ಕೆ ಒಳಪಟ್ಟ ವಲಯ 1 ರ ವ್ಯಾಪ್ತಿಗೆ ಬರುವ ಲಯನ್ಸ್ ಕ್ಲಬ್ ಹಳೆಯಂಗಡಿ, ಲಯನ್ಸ್ ಕ್ಲಬ್ ಕಾಟಿಪಳ್ಳ - ಕೃಷ್ಣಾಪುರ, ಲಯನ್ಸ್ ಕ್ಲಬ್ ಕಿನ್ನಿಗೋಳಿ, ಲಯನ್ಸ್ ಕ್ಲಬ್ ಕರ್ನಿರೆ - ಬಳ್ಕುಂಜೆ, ಲಯನ್ಸ್ ಕ್ಲಬ್ ಕಟೀಲು - ಎಕ್ಕಾರು ಗಳನ್ನು ಮುಂದಿನ ವರ್ಷಕ್ಕೆ ನೇತೃತ್ವ ವಹಿಸಿ ಮುನ್ನಡೆಸುವ ಜವಾಬ್ದಾರಿಯನ್ನು ಲಯನ್ನು ಜಿಲ್ಲಾ ಗವರ್ನರ್ ದೀಪಕ್ ಪೆರ್ಮುದೆ ಅವರಿಗೆ ವಹಿಸಿದ್ದು, ಈ ಎಲ್ಲಾ 5 ಕ್ಲಬ್ ಗಳು ಒಟ್ಟು ಸುಮಾರು 155 ಮಂದಿ ಸದಸ್ಯರನ್ನು ಒಳಗೊಂಡಿದೆ.
  ದೀಪಕ್ ಪೆರ್ಮುದೆ ಅವರು ಪ್ರಸ್ತುತ ವರ್ಷದಲ್ಲಿ ಲಯನ್ಸ್ ಜಿಲ್ಲಾ ಸಂಪುಟದ ಜಾಗತಿಕ ವಿಸ್ತರಣಾ ತಂಡದ ಸಹಾಯಕ ಜಿಲ್ಲಾ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.