ಶ್ರೀ ದೇವಿ ಭಜನಾ ಮಂದಿರದ ಸಮುದಾಯ ಭವನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 1.50 ಲಕ್ಷ ಅನುದಾನ
ಬಜಪೆ:ಬಜಪೆ ಯೋಜನಾ ಕಚೇರಿ ವ್ಯಾಪ್ತಿಯ ಕಾವೂರ್ ವಲಯದ ಮಳವೂರ್ ಕಾರ್ಯಕ್ಷೇತ್ರದ ಶ್ರೀ ದೇವಿ ಭಜನಾ ಮಂದಿರದ ಸಮುದಾಯ ಭವನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 1.50 ಲಕ್ಷ ಅನುದಾನವನ್ನು ಭಜನಾ ಮಂದಿರದ ಸಮಿತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಜಪೆ ಇದರ ಯೋಜನಾಧಿಕಾರಿ ಗಿರೀಶ್ ಎಂ ರವರು ವಿತರಿಸಿದರು. ಈ ಸಂಧರ್ಭದಲ್ಲಿ ಮಳವೂರ್ ಒಕ್ಕೂಟ ಅಧ್ಯಕ್ಷ ಭೋಜರಾಜ ಕೋಟ್ಯಾನ್, ವಲಯದ ಮೇಲ್ವಿಚಾರಕ ಅಭಿಮಾನ್ ಜೈನ್ , ಸೇವಾಪ್ರತಿನಿಧಿ ಪ್ರಭಾವತಿ, ಸಂಘದ ಸದಸ್ಯರುಗಳು, ಮಂದಿರದ ಅಧ್ಯಕ್ಷ ಮಿತ್ರದಾಸ್ ಅಮೀನ್, ಗೌರವ ಸಲಹೆಗಾರರಾದ ಜಗನ್ನಾಥ ಸಾಲಿಯಾನ್, ಸೇಸಪ್ಪ ಅಮೀನ್ ಹಾಗೂ ಸಮಿತಿಯ ಸದಸ್ಯರುಗಳು ಉಪಸ್ಥಿರಿದ್ದರು. ಸಮಿತಿಯ ಸದಸ್ಯ ಧರಣೇಶ್ ಕಾರ್ಯಕ್ರಮ ನಿರೂಪಿಸಿದರು.