Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಎಕ್ಕಾರಿನಲ್ಲಿ ಮಕ್ಕಳ ಬೇಸಿಗೆ ಶಿಬಿರ

ಬಜಪೆ:ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಗ್ರಾಮ ಪಂಚಾಯತಿ ಅರಿವು ಕೇಂದ್ರ ಎಕ್ಕಾರಿನಲ್ಲಿ ಮೇ.13  ರಿಂದ ಮೇ.15  ರವರೆಗೆ ಬೇಸಿಗೆ ಶಿಬಿರವು  ನಡೆಯಿತು.ಬೇಸಿಗೆ ಶಿಬಿರವನ್ನು ಸುರತ್ಕಲ್ ನ ಗೋವಿಂದದಾಸ ಕಾಲೇಜಿನ ಉಪನ್ಯಾಸಕ ಡಾ. ಸಂತೋಷ್ ಆಳ್ವ  ಉದ್ಘಾಟಿಸಿ ಸಂವಹನ ಕೌಶಲ್ಯದ ಬಗ್ಗೆ ಮಕ್ಕಳಿಗೆ ಮಾಹಿತಿಗಳನ್ನು ನೀಡಿದರು. ಪ್ರಾಪ್ತಿ ತುಳಸಿ ಪ್ರಕಾಶ್ ರವರು ಪೇಪರ್ ಕ್ರಾಫ್ಟ್ ಬಗ್ಗೆ  ತಿಳಿಸಿದರು. ಕಾಂಚನ ಗಣೇಶ್  ಅವರು  ಯೋಗ ತರಗತಿಯನ್ನು  ನಡೆಸಿಕೊಟ್ಟರು.ಲಘು ಸಂಗೀತ ಅಭಿನಯ ಗೀತೆಯ ಬಗ್ಗೆ ಭಾರತಿ ಶೆಟ್ಟಿಯವರು  ತಿಳಿಸಿಕೊಟ್ಟರು. ಉಷಾ ಅವರು  ಹೂಕುಂಡ, ಮುಖವಾಡಗಳ ರಚನೆ , ಪ್ರೇರಣ ವೈಷ್ಣವಿಯವರು ಗೂಡು ದೀಪ ರಚನೆಯ ಬಗ್ಗೆ  ಮಾಹಿತಿ ನೀಡಿದರು. ಶಿಬಿರದ ಸಮಾರೋಪ ಸಮಾರಂಭವನ್ನು  ಭಾರತೀಯ ಸೇನೆಯ ನಿವೃತ್ತ ಅಧಿಕಾರಿ  ಉದಯಚಂದ್ರ ಉಡುಪ ಅವರು ದೀಪ ಬೆಳಗಿಸಿ ಶಿಬಿರಾರ್ಥಿಗಳಿಗೆ ಭಾರತೀಯ ಸೇನೆಯ ಬಗ್ಗೆ ಮಾಹಿತಿ ನೀಡಿದರು. ಅಂಚೆ ಇಲಾಖೆಯ ಬಗ್ಗೆ  ಅಂಚೆ ಅಧಿಕಾರಿ ಸುರೇಖಾ ರವರು ಮಾಹಿತಿಯನ್ನು ನೀಡಿದರು.ಶಿಬಿರದ  ಮೂರು ದಿನಗಳಲ್ಲಿ  ಕ್ರಿಯಾತ್ಮಕ ಚಟುವಟಿಕೆಯನ್ನು ಎಕ್ಕಾರು ಗ್ರಂಥಾಲಯದ  ಗ್ರಂಥಪಾಲಕಿ  ಹೇಮಲತಾ ಶರ್ಮ ರವರು ನಡೆಸಿಕೊಟ್ಟರು. ಮಕ್ಕಳು ಕ್ರಾಫ್ಟ್ ಬೇಲೂನು ತೋರಣ ಕಟ್ಟುವುದರ ಮೂಲಕ ಗ್ರಂಥಾಲಯವನ್ನು ಅಲಂಕರಿಸಿದರು. ಎಕ್ಕಾರು ಗ್ರಾ.ಪಂ ಮಾಜಿ ಅಧ್ಯಕ್ಷ ಪ್ರವೀಣ್ ಆಚಾರ್ಯ ಹಾಗೂ ಪಿಡಿಓ ರಾಜೇಂದ್ರ ಎಂ.ಶೆಟ್ಟಿ ಯವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಈ ಸಂದರ್ಭ ವಿಕಣ್ಣನ್,ಸಂಜೀವಿನಿ ಒಕ್ಕೂಟದ ಸದಸ್ಯರುಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ   ಪಂಚಾಯತ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
 ಶ್ರೀಮತಿ ಗೀತಾ ಹಾಗೂ  ಶ್ರೀಮತಿ ಮಮತ ಮತ್ತು ಮಕ್ಕಳು ಪ್ರಾರ್ಥನೆಯನ್ನು  ನೆರವೇರಿಸಿದರು. ಗ್ರಂಥಪಾಲಕಿ ಶ್ರೀಮತಿ ಹೇಮಲತಾ ಶರ್ಮಾ ಅವರು ಕಾರ್ಯಕ್ರಮದ ಸಂಯೋಜನೆ ಹಾಗೂ ನಿರೂಪಣೆಗೈದರು.