ಶ್ರೀ ದುರ್ಗಾಪರಮೇಶ್ವರೀ ಮಹಾಮ್ಮಾಯಿ ದೇವಸ್ಥಾನ ಉಳೆಪಾಡಿ ಇಲ್ಲಿನ 16 ನೇ ಪ್ರತಿಷ್ಠಾ ವರ್ದಂತಿ ಮತ್ತು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ
ಕಿನ್ನಿಗೋಳಿ:ಕಳೆದ 16 ವರ್ಷಗಳಿಂದ ಉಚಿತ ಸಾಮೂಹಿಕ ಮಾಡಿಕೊಂಡು ಬಂದಿರುವ ಮೋಹನ್ ದಾಸ್ ಸುರತ್ಕಲ್ ಅವರ ಸಾಧನೆ ಅಭಿನಂದನೀಯ
ಎಂದು ಕಟೀಲು ದೇವಳದ ಅರ್ಚಕ ಸದಾನಂದ ಆಸ್ರಣ್ಣ
ಹೇಳಿದರು. ಅವರು ಶ್ರೀ ದುರ್ಗಾಪರಮೇಶ್ವರೀ ಮಹಾಮ್ಮಾಯಿ ದೇವಸ್ಥಾನ ಉಳೆಪಾಡಿ ಇಲ್ಲಿನ 16 ನೇ ಪ್ರತಿಷ್ಠಾ ವರ್ದಂತಿ ಮತ್ತು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭ ಮೂರು ಜೋಡಿಗಳಿಗೆ ಸಾಮೂಹಿಕ ವಿವಾಹ, ನವಚಂಡಿಕಾಯಾಗ, ಕುಣಿತ ಭಜನೆ, ಪ್ರತಿಷ್ಟಾ ಧರ್ಮ ಸಂಸತ್ ನಡೆಯಿತು. ಈ ಸಂದರ್ಭ
ಕನ್ನಡ ಸಾಹಿತ್ಯ ಪರಿಷ್ಯತ್ ಮಾಜಿ ರಾಜ್ಯಧ್ಯಕ್ಷ ಡಾ.ಹರಿಕೃಷ್ಣ ಪುನರೂರು,ಡಾ.ಕೃಷ್ಣಕುಮಾರ್ ಶೆಟ್ಟಿ ಬಳ್ಕುಂಜೆಗುತ್ತು, ರಾಜೇಶ್ ಶೆಟ್ಟಿ ಪುಲೋಡಿಬೀಡು, ಸುಧಾಕರ ಮೆಸ್ಕಾಂ, ವೇದಮೂರ್ತಿ ರಮಾನಾಥ ಭಟ್ ಮೂಲ್ಕಿ, ಚೇತನಾ ಮೋಹನದಾಸ್, ಧನ್ಯ ಸುರತ್ಕಲ್, ರಾಜೇಶ್ ಪುಲೋಡಿ ಬೀಡು, ಮಂಜುನಾಥ ಮಂಗಳೂರು, ಅಗರಿ ರಾಘವೇಂದ್ರ ರಾವ್ , ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು. ಧರ್ಮದರ್ಶಿ ಮೋಹನ್ ದಾಸ್ ಸುರತ್ಕಲ್ ಸ್ವಾಗತಿಸಿ. ಸತೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.