ತೋಕೂರು ಶ್ರೀ ಸುಬ್ರಹ್ಮಣ್ಯ ದೇವರ ಪ್ರತಿಷ್ಠಾಪನಾ ಮಹೋತ್ಸವ ವರ್ಷಾಚರಣೆ
ಹಳೆಯಂಗಡ : ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿಶ್ರೀ ಸುಬ್ರಹ್ಮಣ್ಯ ದೇವರ ಪ್ರತಿಷ್ಠಾಪನಾ ಮಹೋತ್ಸವದ ವರ್ಷಾಚರಣೆ ಮೇ. 12 ರಂದು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಶಿಬರೂರು ಗೋಪಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು. ಮೇ 12 ರ ಬೆಳಿಗ್ಗೆ 6ಕ್ಕೆ ದೇವರಿಗೆ ಪಂಚಾಮೃತ ಅಭಿಷೇಕ, ಬೆಳಿಗ್ಗೆ 10.05ಕ್ಕೆ ಮಿಥುನ ಲಗ್ನದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರಿಗೆ ನವಚತ್ವಾರಿಂಷತ್ ಕಲಶಾಭಿಷೇಕ, ಪ್ರಸನ್ನ ಪೂಜೆ,ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು ಸಂಜೆ 6 ಕ್ಕೆ ದೊಡ್ಡರಂಗಪೂಜೆ, ರಾತ್ರಿ 7 ಕ್ಕೆ ಬಲಿ ಮಹೋತ್ಸವ ನಡೆಯಿತು ಈ ಸಂದರ್ಭದಲ್ಲಿ ಪ್ರಧಾನ ಅರ್ಚಕರಾದ ಟಿ ಕೆ ಮಧುಸೂದನ ಆಚಾರ್ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಗುರುರಾಜ್ ಎಸ್ ಪೂಜಾರಿ, ಸದಸ್ಯರಾದ ಪುರುಷೋತ್ತಮ ಕೋಟ್ಯಾನ್, ಅಶೋಕ್ ಕುಂದರ್, ಸಂಪತ್ ಜೆ ಶೆಟ್ಟಿ ತೋಕೂರುಗುತ್ತು, ವಿಶ್ವನಾಥ , ಭಾಸ್ಕರ್ ದೇವಾಡಿಗ , ಸವಿತಾ ಬೆಳ್ಳಾಯರು, ಶೋಭಾ ವಿ ಅಂಚನ್ ಮತ್ತು ಗ್ರಾಮಸ್ಥರಾದ ಹರಿದಾಸ್ ಭಟ್,ರಾಮಣ್ಣ ದೇವಾಡಿಗ ಮುಂಬೈ, ಪುರುಷೋತ್ತಮ ರಾವ್, ವ್ಯಾಸರಾವ್ ಚೆನ್ನೈ ಮತ್ತು ಸಹೋದರರು ಹಾಗೂ ಊರಿನ ಗ್ರಾಮಸ್ಥರು. ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು