ತೋಕೂರು: ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಆಕಸ್ಮಿಕ ಬೆಂಕಿ-ಲಕ್ಷಾಂತರ ರೂ ನಷ್ಟ
ತೋಕೂರು: ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಮನೆಯ ಸಾಮಾನುಗಳು ಹೊತ್ತಿ ಉರಿದು ಲಕ್ಷಾಂತರ ರೂ ನಷ್ಟ ಸಂಭವಿಸಿದ ಘಟನೆ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ತೋಕೂರು ಗ್ರಾಮದ ತಾಳಿಗುರಿ ಚರ್ಚ್ ಶಾಲೆಯ ಬಳಿಯ ಮನೆಯಲ್ಲಿ ಗುರುವಾರ ರಾತ್ರಿ ನಡೆದಿದೆ
ತಾಳಿಗುರಿ ಬಳಿಯ ನಿವಾಸಿ ಶಾಂತಿ ಮಸ್ಕರೇಞಸ್ ಎಂಬವರು ಕುಟುಂಬ ಸಮೇತ ನೆರೆಮನೆಯಲ್ಲಿರುವ ಮೆಹಂದಿ ಕಾರ್ಯಕ್ರಮಕ್ಕೆ ಹೋಗಿರುವಾಗ ಮನೆಯ ಅಡುಗೆ ಕೋಣೆಯಲ್ಲಿದ್ದ ಇನ್ವರ್ಟರ್ ಬ್ಯಾಟರಿಯಲ್ಲಿ ದೋಷ ಕಾಣಿಸಿಕೊಂಡು ಶಾರ್ಟ್ ಸರ್ಕ್ಯೂಟ್ ಆಗಿ ಭಾರೀ ಶಬ್ದ ಉಂಟಾಗಿ ಅಡುಗೆ ಕೋಣೆಯ ಎಲೆಕ್ಟ್ರಾನಿಕ್ ವಸ್ತುಗಳಾದ ವಾಷಿಂಗ್ ಮೆಷಿನ್, ಫ್ರಿಡ್ಜ್ ಗೆ ಬೆಂಕಿ ತಗಲಿದೆ . ಬೆಂಕಿಯ ಕೆನ್ನಾಲಿಗೆಯಿಂದ ಅಡುಗೆ ಕೋಣೆಯ ಮೇಲ್ಚಾವಣಿಗೆ ಹಾನಿಯಾಗಿದೆ
ಅಡುಗೆ ಕೋಣೆಯಲ್ಲಿ ಯಾರು ಇಲ್ಲದ ಕಾರಣ ಜೀವ ಹಾನಿ ತಪ್ಪಿದೆ. ಅಗ್ನಿ ಅವಘಡದಿಂದ ಸುಮಾರು 10 ಲಕ್ಷಕ್ಕೂ ಮಿಕ್ಕಿ ನಷ್ಟ ಸಂಭವಿಸಿದ್ದು ಸ್ಥಳಕ್ಕೆ ಪಡುಪಣಂಬೂರು ಗ್ರಾಮ ಪಂಚಾಯತ್ ಮಾಜೀ ಅಧ್ಯಕ್ಷ ಮೋಹನ್ ದಾಸ್,ಮುಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ
ಮನೆ ಹಾನಿ ಬಗ್ಗೆ ಮುಲ್ಕಿ ತಹಶಿಲ್ದಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ