Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಪೆರ್ಮುದೆ ಗ್ರಾಮ ಪಂಚಾಯತ್, ಅರಿವು ಕೇಂದ್ರ ಪೆರ್ಮುದೆ ಜಂಟಿ ಆಶ್ರಯದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ

ಬಜಪೆ :ಪೆರ್ಮುದೆ ಗ್ರಾಮ ಪಂಚಾಯತ್,  ಅರಿವು ಕೇಂದ್ರ ಪೆರ್ಮುದೆ ಜಂಟಿ ಆಶ್ರಯದಲ್ಲಿ
 ಗ್ರಾಮೀಣ ಮಕ್ಕಳ 2 ನೇ  ದಿನದ ಬೇಸಿಗೆ ಶಿಬಿರ ವು   ಪೆರ್ಮುದೆ ಗ್ರಾಮ ಪಂಚಾಯತ್ ನ  ಸಭಂಗಣದಲ್ಲಿ ನಡೆಯಿತು.
 ಶಾಂತಳಿಕೆ ಅಂಗನವಾಡಿ ಕೇಂದ್ರದ ಶಿಕ್ಷಕಿ ಲೋಕಾಕ್ಷಿಯವರು ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ  ಭಾಗವಹಿಸಿ, ಮಕ್ಕಳಿಗೆ ನೃತ್ಯ, ಸಂಗೀತ, ಆಟೋಟಗಳನ್ನು ನಡೆಸಿಕೊಟ್ಟರು.
ಪೆರ್ಮುದೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ರಾಥೋಡ್, ಶ್ರೀ ಶಾರದಾ ಕಲಾ ಪ್ರಕಾಶನದ ಸ್ಥಾಪಕ ಅಧ್ಯಕ್ಷ ದೀಪಕ್ ಪೆರ್ಮುದೆ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ವೀರ ಡಿಕೋಸ್ಟಾ, ಅರಿವು ಕೇಂದ್ರದ ಮೇಲ್ವಿಚಾರಕಿ ಶಶಿಕಲಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.