Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಲಕರಣೆ ವಿತರಣಾ ಸಮಾರಂಭ

ಮೂಲ್ಕಿ: ಶ್ರೀ ನಾರಾಯಣ ಗುರುಗಳ ತತ್ವದಂತೆ ಹಲವು ದಶಕಗಳಿಂದ ಮೂಲ್ಕಿ ಸಂಘವು ಶಿಕ್ಷಣ ಸೌಲಭ್ಯ ಹಾಗೂ ಆರ್ಥಿಕ ಸಹಕಾರ ವಿತರಿಸುತ್ತಿದ್ದು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ಸಮಾಜಕ್ಕೆ ಕೀರ್ತಿ ತರಬೇಕು ಎಂದು ಮೂಲ್ಕಿ ಕ್ಷೀರಸಾಗರ ವಿವಿದ್ದೋದೇಶ ಸಹಕಾರ ಸಂಘದ ಅಧ್ಯಕ್ಷ ಗೋಪೀನಾಥ ಪಡಂಗ ಹೇಳಿದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಲಕರಣೆ ವಿತರಣಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೂಲ್ಕಿ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು ಮಾತನಾಡಿ, ಸಂಘವು ಲಕ್ಷಾಂತರ ರೂ ವೆಚ್ಚದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸಹಕಾರಿ ಯೋಜನೆಗಳನ್ನು ನೀಡುತ್ತಿದ್ದು ವಿದ್ಯಾರ್ಥಿಗಳಿ ಉನ್ನತ ಶಿಕ್ಷಣ ಪಡೆದು ಉದ್ಯೋಗ ಗಳಿಸಿದ ಬಳಿಕ ತಾವು ವಿದ್ಯಾರ್ಥಿಗಳ ಶೈಕ್ಷಣಿಕ ಯೋಜನೆಗೆ ಸಹಕಾರ ನೀಡಬೇಕು ಎಂದರು.
ಈ ಸಂದರ್ಭ ಮೂರನೇ ತರಗತಿಯಿಂದ ಹತ್ತನೇ ತರಗತಿಯ ಸುಮಾರು೧೯೦ ವಿದ್ಯಾರ್ಥಿಗಳಿಗೆ ರೂ ೮೦ ಸಾವಿರ ವೆಚ್ಚದಲ್ಲಿ ಶೈಕ್ಷಣಿಕ ಸಲಕರಣೆ ನೀಡಲಾಯಿತು.
ಈ ಸಂದರ್ಭ ಆಡಳಿತ ಸಮಿತಿ ಸದಸ್ಯರು, ಪೂರ್ವಾಧ್ಯಕ್ಷರುಗಳು, ಕಟ್ಟಡ ಸಮಿತಿ, ಹಾಗೂ ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.
ವಾಮನ ಕೋಟ್ಯಾನ್ ಸ್ವಾಗತಿಸಿದರು, ನರೇಂದ್ರ ಕೆರೆಕಾಡು ನಿರೂಪಿಸಿದರು, ಜಯ ಕುಮಾರ್ ಕುಬೆವೀರು ವಂದಿಸಿದರು. ಚಿತ್ರ:ಎಂಯುಎಲ್_ಮೇ೧೭_೧ ಸಂಘ/ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಮೂರನೇ ತರಗತಿಯಿಂದ ಹತ್ತನೇ ತರಗತಿಯ ಸುಮಾರು೧೯೦ ವಿದ್ಯಾರ್ಥಿಗಳಿಗೆ ರೂ ೮೦ ಸಾವಿರ ವೆಚ್ಚದಲ್ಲಿ ಶೈಕ್ಷಣಿಕ ಸಲಕರಣೆ ನೀಡಲಾಯಿತು.