ಮುಲ್ಕಿ: ಸಂಭ್ರಮದ ಬಕ್ರೀದ್ ಹಬ್ಬ ಆಚರಣೆ
ಮುಲ್ಕಿ: ಮುಲ್ಕಿ ಪರಿಸರದಲ್ಲಿ ಬಕ್ರೀದ್ ಹಬ್ಬದ ಆಚರಣೆ ಸಂಭ್ರಮದಿಂದ ನಡೆಯಿತು. ಬೆಳಗಿನಿಂದಲೇ ಮುಸ್ಲಿಂ ಬಾಂಧವರು ಮಸೀದಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಮುಲ್ಕಿ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಮಸೀದಿಯ ಧರ್ಮಗುರುಗಳಾದ ಉಸ್ಮಾನ್ ಫೈಝೀ ತೋಡಾರ್ ಹಾಗೂ ಕಾರ್ನಾಡ್ ಮಸೀದಿಯ ಧರ್ಮಗುರುಗಳಾದ ರಿಯಾಜ್ ಫೈಝೀ ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭ ಮಸೀದಿಯ ಗೌರವಾಧ್ಯಕ್ಷ ಇನಾಯತ್ ಆಲಿ, ಅಧ್ಯಕ್ಷ ಸೊಹೈಲ್ ಹೈದರ್, ಉಪಾಧ್ಯಕ್ಷ ಪುತ್ತುಭಾವ, ಕೋಶಾಧಿಕಾರಿ , ಪ್ರದಾನ ಕಾರ್ಯದರ್ಶಿಫಾರೂಕ್ ಹಾಜಿ ಇಬ್ರಾಹಿಂ,ಸಮಿತಿ ಸದಸ್ಯರಾದ ಇಕ್ಬಾಲ್ ಅಹ್ಮದ್, ಎಂ.ಕೆ. ಹಸೈನ್ ಕಾರ್ನಾಡ್, ಲಿಯಾಕತ್ ಆಲಿ, ಮತ್ತಿತರರು ಉಪಸ್ಥಿತರಿದ್ದರು.
ಮುಲ್ಕಿ ಪರಿಸರದ ಕಾರ್ನಾಡ್, ಹಳೆಯಂಗಡಿ, ಕಿನ್ನಿಗೋಳಿ, ಪಕ್ಷಿಕೆರೆ, ಅಂಗರಗುಡ್ಡೆ, ಪುನರೂರು, ಕರ್ನಿರೆ, ಕದಿಕೆ ಮಸೀದಿಗಳಲ್ಲಿ ಸಮಸ್ತ ಮುಸ್ಲಿಂ ಬಾಂಧವರಿಂದ ಬಕ್ರೀದ್ ಹಬ್ಬದ ಆಚರಣೆ ಸಂಭ್ರಮದಿಂದ ನಡೆಯಿತು.