Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ:ಬೈಕ್ ಕಳ್ಳರ ಬಂಧನ


 ಮುಲ್ಕಿ:ಬಸ್ಸು ನಿಲ್ದಾಣದ ಬಳಿ ನಿಲ್ಲಿಸಿದ್ದ ಬೈಕ್ ಅನ್ನು ಕಳವು ಮಾಡಿದ ಇಬ್ಬರು ಆರೋಪಿಗಳನ್ನು ಮುಲ್ಕಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿಗಳನ್ನು ಮುಕ್ಕ ಮಸೀದಿ ಬಳಿಯ ನಿವಾಸಿ ಮಹಮ್ಮದ್‌ ರಾಜಿಕ್‌(38) ಹಾಗೂ ಬೈ ಕಂಪಾಡಿ ಅಂಗರಗುಂಡಿಯ ನಿವಾಸಿ ಉಬೈದ್‌ ಹೈದರ್‌ (40) ಎಂದು ಗುರುತಿಸಲಾಗಿದೆ.
ಮುಲ್ಕಿ ಬಸ್ ನಿಲ್ದಾಣದ ಬಳಿಯ ಅಪೋಲೋ ಪಾರ್ಮಸಿಯ ಎದುರು ಭಾಗದಲ್ಲಿ ನ ಮೋಹನ್‌ ಶೆಟ್ಟಿಯವರು  ಮೇ 18 ರ ಸಂಜೆ ತಮ್ಮ ಅಳಿಯ ನಿರಂಜನ ಶೆಟ್ಟಿಯವರ ಕೆಎ-20-ಇಬಿ-6383 ನೇ ನೊಂದಣಿ ಸಂಖ್ಯೆಯ ಕಪ್ಪು ಬಣ್ಣದ ಯುನಿಕಾರ್ನ್ ಬೈಕನ್ನು   ಬೀಗ ಸಹಿತ ಪಾರ್ಕ್ ಮಾಡಿ ಸಮೀಪದಲ್ಲಿದ್ದ  ಕೋಳಿ ಅಂಗಡಿಗೆ ಹೋಗಿ ವಾಪಾಸು ಬಂದು ನೋಡಿದಾಗ ಸ್ಥಳದಲ್ಲಿ ಬೈಕ್ ನಾಪತ್ತೆಯಾಗಿತ್ತು 
 ಈ ಬಗ್ಗೆ ಬೈಕ್  ನ ಮಾಲೀಕ  ನಿರಂಜನ ಶೆಟ್ಟಿ ಗೆ ವಿಚಾರ ತಿಳಿಸಿ ಅನೇಕ ಕಡೆ ಬೈಕನ್ನು ಹುಡುಕಾಡಿ ಬೈಕ್ ಸಿಗದೇ ಇದ್ದುದರಿಂದ ಮುಲ್ಕಿ ಪೊಲೀಸ್‌ ಠಾಣೆಯಲ್ಲಿ  ದೂರು ನೀಡಿದ್ದರು.ಪ್ರಕರಣದ ಬಗ್ಗೆ ಕ್ಷಿಪ್ರ ಕಾರ್ಯಾಚರಣೆ  ನಡೆಸಿದ  ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಬ್ಯೆಕ್‌ ಅನ್ನು ವಶಪಡಿಸಿಕೊಂಡಿದ್ದಾರೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.