Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ: ಟಿಪ್ಪರ್ ಹಾಗೂ ಲಾರಿಗಳ ನಡುವೆ ಸರಣಿ ಅಪಘಾತ


ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಕೋಲ್ನಾಡ್ ಜಂಕ್ಷನ್ ಬಳಿ ಎರಡು ಟಿಪ್ಪರ್ ಹಾಗೂ ಲಾರಿಗಳ ನಡುವೆ ಸರಣಿ ಅಪಘಾತ ನಡೆದಿದ್ದು ಟಿಪ್ಪರ್ ಚಾಲಕ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪವಾಡ ಸದೃಶ ಪಾರಾಗಿದ್ದಾನೆ
ಗಾಯಾಳು ಟಿಪ್ಪರ್ ಚಾಲಕನನ್ನು ಚಂದ್ರ ಎಂದು ಗುರುತಿಸಲಾಗಿದೆ 
ಟಿಪ್ಪರ್ ಚಾಲಕ ಮಣ್ಣು ಹೇರಿಕೊಂಡು ಹಳೆಯಂಗಡಿ ಕಡೆಯಿಂದ ಬರುತ್ತಿದ್ದು ಕೋಲ್ನಾಡ್ ಜಂಕ್ಷನ್ ಬಳಿ ಯು ಟರ್ನ್ ಮಾಡುತ್ತಿದ್ದಾಗ ಉಡುಪಿ ಕಡೆಯಿಂದ ಕೇರಳ ಕಡೆಗೆ ಪೈಪ್ಗಳನ್ನು ಹೇರಿಕೊಂಡು ಹೋಗುತ್ತಿದ್ದ ಲಾರಿಗೆ ಹಾಗೂ ಕೋಲ್ನಾಡ್ ಕೈಗಾರಿಕಾ ಪ್ರದೇಶದಿಂದ ಹೆದ್ದಾರಿ ಕಡೆಗೆ ಬರುತ್ತಿದ್ದ ಇನ್ನೊಂದು ಟಿಪ್ಪರ್ ಗೆ ಡಿಕ್ಕಿ ಹೊಡೆದಿದೆ
ಅಪಘಾತದ ತೀವ್ರತೆಗೆ ಟಿಪ್ಪರ್ ನ ಟಯರ್ ಸ್ಪೋಟಗೊಂಡಿದೆ ಹಾಗೂ ಲಾರಿಯ ಎದುರು ಭಾಗ ಜಖಂಗೊಂಡಿದೆ.
ಅಪಘಾತದಿಂದ ಕೆಲ ಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತ ಉಂಟಾಯಿತು ಕೂಡಲೇ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೂರು ವಾಹನಗಳನ್ನು ಸ್ಥಳದಿಂದ ತೆರವುಗೊಳಿಸಿದ್ದಾರೆ.