Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ:ಮಾದಕ ವಸ್ತು ಸೇವನೆ- ಒರ್ವನ ಬಂಧನ


ಮುಲ್ಕಿ: ಪೊಲೀಸ್‌ ಠಾಣಾ ವ್ಯಾಪ್ತಿಯ  ಬಪ್ಪನಾಡು ಗ್ರಾಮದ ಕೊಳಚಿಕಂಬ್ಳದ ಸುಖಾನಂದ ಶೆಟ್ಟಿ ಪಾರ್ಕ್ ಬಳಿ ಮಾದಕ ವಸ್ತು ಸೇವಿಸುತ್ತಿದ್ದ ಆರೋಪಿಯನ್ನು ಮುಲ್ಕಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ 
ಆರೋಪಿಯನ್ನು  ಕೆ ಎಸ್‌ ರಾವ್‌ ನಗರದ ಬಳಿಯ ನಿವಾಸಿ  ಮಹಮ್ಮದ್ ಅನ್ವರ್ ( 42) ಎಂದು ಗುರುತಿಸಲಾಗಿದೆ 
ಮುಲ್ಕಿ ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ
ಆರೋಪಿ ಮೊಹಮ್ಮದ್ ಅನ್ವರ್ ಎಂಬಾತ
ಕೊಳಚಿಕೊಂಬಳ ಬಳಿ ಅಮಲಿನಲ್ಲಿ ವರ್ತಿಸುತ್ತಾ ನಿಂತಿರುವುದು ಕಂಡುಬಂದಿದ್ದು  ಆತನನ್ನು ವಿಚಾರಿಸಿ ತನಿಖೆ ನಡೆಸಿದಾಗ ಆತ ಎಂ.ಡಿ.ಎಂ.ಎ. ಮಾದಕ ವಸ್ತು ಹಾಗೂ ಎರಡು ದಿನದ ಹಿಂದೆ ಸ್ವಲ್ಪ ಗಾಂಜಾವನ್ನು ಸಹ ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾನೆ
ಕೂಡಲೇ ಪೊಲೀಸರು ಆತನನ್ನು ವಶಕ್ಕೆ ಪಡೆದು  ವೈದ್ಯಕೀಯ ತಪಾಸಣೆ ನಡೆಸಿದಾಗ ಮಾದಕ ವಸ್ತು  ಸೇವನೆ ಮಾಡಿರುವುದು  ದೃಢಪಟ್ಟಿದ್ದು ಪ್ರಕರಣ ದಾಖಲಿಸಿದ್ದಾರೆ.