ಬಪ್ಪನಾಡು ದೇವಸ್ಥಾನದಲ್ಲಿ ವಿಜೃಂಭಣೆಯ ಪತ್ತನಾಜೆಯ ಶ್ರೀ ದೇವರ ಉತ್ಸವ ಬಲಿ- ವಸಂತಪೂಜೆ
ಮುಲ್ಕಿ:ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಪತ್ತನಾಜೆಯ ಶ್ರೀ ದೇವರ ಉತ್ಸವ ಬಲಿ, ಶ್ರೀರಂಗ ಪೂಜೆ, ವಸಂತ ಪೂಜೆ ಯು ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ, ಅರ್ಚಕರಾದ ನರಸಿಂಹ ಭಟ್, ಶ್ರೀಪತಿ ಉಪಾಧ್ಯಾಯ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು
ಈ ಸಂದರ್ಭ ದೇವಸ್ಥಾನದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು, ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ಪ್ರಸಾದ ಭಟ್,ಗೋಪಾಲಕೃಷ್ಣ ಭಟ್,ಶ್ರೀನಾಥ್ ಭಟ್,
ಅಭಿವೃದ್ಧಿ ಸಮಿತಿಯ ಸುನಿಲ್ ಆಳ್ವ,ಅತುಲ್ ಕುಡ್ವ,ಸತೀಶ್ ಭಂಡಾರಿ, ರಂಗಕರ್ಮಿ ಚಂದ್ರಶೇಖರ ಸುವರ್ಣ,ರಮೇಶ್ ಅಮೀನ್ ಕೊಕ್ಕರಕಲ್ , ಹರ್ಷರಾಜ ಶೆಟ್ಟಿ,ನಾಗಸ್ವರ ವಾದಕ ನಾಗೇಶ್ ಬಪ್ಪನಾಡು ಅಕೌಂಟೆಂಟ್ ಶಿವಶಂಕರ್,,ಗಿರೀಶ್ ಮೆಂಡನ್,ಕಾರ್ತಿಕ್ ಕೋಟ್ಯಾನ್, ಮತ್ತಿತರು ಉಪಸ್ಥಿತರಿದ್ದರು.