Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ; ರೈಲ್ವೇ ನಿಲ್ದಾಣದ ನೂತನ ಪ್ಲಾಟ್ ಫಾರ್ಮ್ ಲೋಕಾರ್ಪಣೆಗೆ ಕ್ಷಣಗಣನೆ



 ಮುಲ್ಕಿ: ರೈಲ್ವೇ ಪ್ರಯಾಣಿಕರ ಬಹುವರ್ಷಗಳ ಬೇಡಿಕೆಯಾಗಿದ್ದ ಕೊಂಕಣ್ ರೈಲ್ವೆ ವ್ಯಾಪ್ತಿಯ ಮುಲ್ಕಿ ರೈಲು ನಿಲ್ದಾಣದ ನೂತನ ಪ್ಲಾ‌ಟ್‌ಫಾರ್ಮ್  ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದೆ 
ಸಂಸದ ಬ್ರಿಜೇಶ್ ಚೌಟ ರವರ ಅನುದಾನದಿಂದ ಮುಲ್ಕಿ ರೈಲು ನಿಲ್ದಾಣದಲ್ಲಿ ಸುಮಾರು 1.42 ಕೋಟಿ ರೂಪಾಯಿಗಳ  ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ದಿಕ್ಕಿನಲ್ಲಿ ನೂತನ ಪ್ಲಾಟ್ಫಾರ್ಮ್, ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳು ಪೂರ್ಣಗೊಂಡಿದ್ದು ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ
ಶೀಘ್ರ ಸ್ಕೈ ವಾಕ್ ನಿರ್ಮಾಣ....
ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ದಿಕ್ಕಿನಲ್ಲಿ ನಿರ್ಮಾಣಗೊಂಡ ಸುಸಜ್ಜಿತ ಫ್ಲಾಟ್ ಫಾರ್ಮ್ ಗೆ ಸಂಪರ್ಕ ಕಲ್ಪಿಸುವ ಸ್ಕೈ ವಾಕ್ ನಿರ್ಮಾಣ ಕಾಮಗಾರಿಗೆ ಅನುದಾನ ಮಂಜೂರಾಗಿದ್ದು ಕಾಮಗಾರಿ ಶೀಘ್ರ ನಡೆಯಲಿದೆ ಎಂದು ಪಡುಪಣಂಬೂರು ಗ್ರಾಮ ಪಂಚಾಯತ್ ಮಾಜೀ  ಅಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯರು ಹೇಳಿದ್ದಾರೆ
ಅವರು ಮಾಧ್ಯಮದೊಂದಿಗೆ ಮಾತನಾಡಿ ನೂತನ ಪ್ಲಾಟ್ ಫಾರ್ಮ್ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೇಂದ್ರ ರೈಲ್ವೇ ಸಹಾಯಕ  ಸಚಿವರಾದ ವಿ ಸೋಮಣ್ಣ ಶೀಘ್ರದಲ್ಲಿ ಉದ್ಘಾಟಿಸಲಿದ್ದಾರೆ ಎಂದರು
ರೈಲ್ವೇ ನಿಲ್ದಾಣ ಸಂಪರ್ಕ ರಸ್ತೆ ಹಾಗೂ ಮೇಲ್ಸೇತುವೆ ದುರಸ್ತಿಗೆ ಆಗ್ರಹ 
ರೈಲ್ವೇ ನಿಲ್ದಾಣ ಮೇಲ್ದರ್ಜೆಗೇರಿಸಿದರೂ ನಿಲ್ದಾಣದ ಸಂಪರ್ಕ ರಸ್ತೆ ಹಾಗೂ ಮೇಲ್ಸೇತುವೆ ಅವ್ಯವಸ್ಥೆಗಳ ಆಗರವಾಗಿ ಪರಿಣಮಿಸಿದೆ ಎಂದು ಸಾಮಾಜಿಕ ಕಾರ್ಯಕರ್ತ ಶರತ್ ಕಾರ್ನಾಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಲ್ಕಿ ರೈಲ್ವೇ ನಿಲ್ದಾಣಕ್ಕೆ ದೂರದ ಮುಂಬೈಯಿಂದ ಅನೇಕ ಪ್ರಯಾಣಿಕರು ಮೂಡಬಿದ್ರೆ ಕಾರ್ಕಳ ಕಿನ್ನಿಗೋಳಿ ಕಟೀಲು ಮತ್ತಿತರ ಕಡೆಗೆ ಬಂದು ಹೋಗುತ್ತಿದ್ದಾರೆ. ನಿಲ್ದಾಣ ಸಂಪರ್ಕ ರಸ್ತೆ ಹಾಗೂ ಇಕ್ಕಟ್ಟಾಗಿರುವ ರೈಲ್ವೇ ಮೇಲ್ಸೇತುವೆ  ಅದೋಗತಿಗೆ ಇಳಿದಿದ್ದು ದುರಸ್ತಿ ಪಡಿಸಬೇಕಾದ ಅನಿವಾರ್ಯತೆ ಇದೆ. ಈ ಭಾಗದಲ್ಲಿ ಕೆಲ ದುಷ್ಕರ್ಮಿಗಳು ತ್ಯಾಜ್ಯ ಕೂಡ ಎಸೆಯುತ್ತಿದ್ದು ನಿಯಂತ್ರಿಸಲು ಸಿಸಿ ಕ್ಯಾಮೆರಾ ಅಳವಡಿಸಬೇಕಾಗಿದೆ ಎಂದು ಹೇಳಿದ್ದಾರೆ 
ಸಾಮಾಜಿಕ ಕಾರ್ಯಕರ್ತ ವಿಷುಕುಮಾರ್ ಕೆಎಸ್ ರಾವ್ ನಗರ ಮಾತನಾಡಿ ಮುಲ್ಕಿ ರೈಲ್ವೇ ನಿಲ್ದಾಣ ಬೆಳೆಯುತ್ತಿದ್ದು ವಂದೇ ಭಾರತ್ ಸಹಿತ ಪ್ರಮುಖ ರೈಲುಗಳ ನಿಲುಗಡೆ ಅವಶ್ಯಕತೆ ಇದೆ. ರೈಲ್ವೇ ನಿಲ್ದಾಣ ಸಂಪರ್ಕ ರಸ್ತೆ ಅಭಿವೃದ್ಧಿಯಾಗಬೇಕಾಗಿದೆ ಎಂದರು.
ವಕೀಲರಾದ ರವೀಶ್ ಕಾಮತ್ ಮಾತನಾಡಿ ಕೇಂದ್ರ ಸರ್ಕಾರ ಹಿಂದಿನ ಮತ್ತು ಈಗಿನ ಸಂಸದರ ಪರಿಶ್ರಮ, ಶಾಸಕರ ಬೆಂಬಲ, ಅದೇ ರೀತಿ ಸ್ಥಳೀಯ ಈಗಿನ ಹಿಂದಿನ ಜನ ಪ್ರತಿನಿಧಿಗಳ ಬೆಂಬಲದೊಂದಿಗೆ ನಿಜವಾದ ಸಾಮಾಜಿಕ ಹೋರಾಟಗಾರ ಕಾರ್ಯಕರ್ತರ ಹೋರಾಟದಿಂದ ರೈಲ್ವೇ ನಿಲ್ದಾಣ ಅಭಿವೃದ್ಧಿಪಥದತ್ತ ಸಾಗುತ್ತಿದೆ ಎಂದು ಹೋರಾಟಗಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ.