ಮೇ.24:"ಅಪ್ಪೆ ಬೇರ್ ದ ತುಳುನಾಡ್" ರಾಷ್ಟ್ರೀಯ ತುಳು ವಿಚಾರ ಸಂಕಿರಣ
ಮೂಲ್ಕಿ: ತುಳುನಾಡಿನ ಮೂಲ ಸಂಸ್ಕೃತಿ, ಆಚಾರ-ವಿಚಾರ, ದೈವ ಪರಂಪರೆ ಹಾಗೂ ತುಳು ಜೀವನ ಮೌಲ್ಯಗಳ ಸಂರಕ್ಷಣೆ ಮತ್ತು ಅದರ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಸದುದ್ದೇಶದಿಂದ ತುಳು ವರ್ಲ್ಡ್ ಫೌಂಡೇಶನ್, ತುಳುವ ಮಹಾಸಭೆ, ಇಂಟರ್ನ್ಯಾಷನಲ್, ಮುಲ್ಕಿ ಬಂಟರ ಸಂಘದ ನೇತೃತ್ವದಲ್ಲಿ ಮುಲ್ಕಿ ಬಿಲ್ಲವ ಸಂಘ ಮಹಿಳಾ ಮಂಡಳಿ, ರೋಟರಿ ಕ್ಲಬ್ , ಲಯನ್ ಕ್ಲಬ್ ಹಾಗೂ ವಿಜಯ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ "ಅಪ್ಪೆ ಬೇರ್ ದ ತುಳುನಾಡ್" ರಾಷ್ಟ್ರೀಯ ತುಳು ವಿಚಾರ ಸಂಕಿರಣವು ಮೇ ೨೪ರಂದು ಭಾನುವಾರ ಮುಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನ್ನಪೂರ್ಣೇಶ್ವರೀ ಸಭಾಂಗಣದಲ್ಲಿ ನಡೆಯಲಿದೆ. ಎಂದು ತುಳುವ ಮಹಾಸಭೆ ಇಂಟರ್ನ್ಯಾಷನಲ್ ನ ಪ್ರಧಾನ ಸಂಚಾಲಕಿ ಭಾನುಮತಿ ಶೆಟ್ಟಿ ಕಕ್ವಗುತ್ತು ಹೇಳಿದರು
ಅವರು ಮೂಲ್ಕಿಯ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಶ್ವದಾದ್ಯಂತೆ ಮಾತೃ ಸಂಸ್ಕೃತಿಯ ತುಳುವರು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ಸಾಹಿತಿ ಹಾಗೂ ತುಳು ಜಾನಪದ ವಿದ್ವಾಂಸೆಯಾದ ಡಾ. ಇಂದಿರಾ ಹೆಗ್ಗಡೆ ವಹಿಸಲಿದ್ದಾರೆ. ಉದ್ಘಾಟನೆಯನ್ನು ಒಡಿಯೂರು ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯೀ ನೆರವೇರಿಸಲಿದ್ದಾರೆ. ದಿಕ್ಕೂಚಿ ಭಾಷಣವನ್ನು ಪ್ರೊ. ಪುರುಷೋತ್ತಮೆ ಬಲ್ಯಾಯ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಕಟೀಲು ಕ್ಷೇತ್ರದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್, ಜಾನಕಿ ಬ್ರಹ್ಮಾವರ, ಶಕುಂತಲಾ ಶೆಟ್ಟಿ, ಶ್ವೇತ ಪಳ್ಳಿ ಹಾಗೂ ಡಾ. ವಾಸುದೇವ ಬೆಳ್ಳೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎಂದರು
ಅವರು ಮಾತನಾಡಿ ಬೆಳಿಗ್ಗೆ ನಡೆಯುವ "ಅಪ್ಪೆಕಟ್ಟು ತುಳುವ ಸಂಸ್ಕೃತಿಯ ಬೇರು" ಗೋಷ್ಠಿಯನ್ನು ಡಾ. ಸಾಯಿಗೀತಾ ಹೆಗ್ಡೆ ಸಂಯೋಜಿಸಲಿದ್ದು, ಅಮೃತ ಅಜಯ್ ಶೆಟ್ಟಿ, ಡಾ. ಜ್ಯೋತಿ ಚೇಳಾಯರು, ಡಾ. ರತಿ ಕೋಡಿಕಲ್, ಶ್ರೀಕಾಂತ್ ಶೆಟ್ಟಿ ಹಾಗೂ ಅರವಿಂದ ಬೆ ಳ್ಚಡ ವಿಚಾರ ಮಂಡನೆ ಮಾಡಲಿದ್ದಾರೆ.
ಮಧ್ಯಾಹ್ನ ನಡೆಯುವ "ಬರಿ ಬಂದ್ರ ಕಾಪುನ ತುಳುವ ಕುಟುಮೊದ ಇತಿಹಾಸಾತ್ಮಕ ಸಾಧಿ" ಗೋಷ್ಠಿಯನ್ನು ಡಾ. ವೈ.ಎನ್. ಶೆಟ್ಟಿ ಸಂಯೋಜಿಸಲಿದ್ದು, ಸಾಯಿನಾಥ್ ಶೆಟ್ಟಿ, ಅರ್ಪಿತಾ ಪ್ರಶಾಂತ್ ಶೆಟ್ಟಿ, ರೇಮಂಡ್ ಡಿ ಕುನ್ಹಾ ತಾಕೊಡೆ, ದಾ.ನಾ. ಉಮ್ಮಣ್ಣ ಹಾಗೂ ವಿದ್ಯಾಶ್ರೀ ಎಸ್ ಉಪನ್ಯಾಸ ನೀಡಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಐಲೇಸ ಬೆಂಗಳೂರು ತಂಡದಿಂದ ಪದ ಪಾಡ್ದನ , ಬೊಳಿಕೆ ಜಾನಪದ ಕೂಟ ತಂಡದಿಂದ ಪಾಡ್ದನ ಮೇಳ, ವಿಜಯ ಕಾಲೇಜು ಮುಲ್ಕಿ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಿಂದ "ಅಪ್ಪೆ ಬೇರ್" ಮೂಲ ಸಂಸ್ಕೃತಿಯ ನಲಿಕೆ ಮತ್ತು ತೂಪರಿಕೆ, ಹಾಗೂ ಬಿಲ್ಲವ ಸಂಘ ಮಹಿಳಾ ಮಂಡಳಿ ಸದಸ್ಯೆಯರಿಂದ "ಬೆನ್ನಿ ಬದುಕು ' ನಲಿಕೆ ನಡೆಯಲಿದೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ,ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತೆರ್, ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷವಿಐಕಳ ಹರೀಶ್ ಶೆಟ್ಟಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಸರ್ವೋತ್ತಮ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ, ಅರವಿಂದ ಪೂಂಜ ಹಾಗೂ ಮಧು ಆಚಾರ್ಯ ಭಾಗವಹಿಸಲಿದ್ದಾರೆ. ಸಮಾರೋಪ ಭಾಷಣವನ್ನು ಜನಪದ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಚಂದ್ರಿಕಾ ಹರೀಶ್ ಶೆಟ್ಟಿ, ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಸಿಂಧು ಗುಜರನ್, ಸರೋಜಿನಿ ಸುವರ್ಣ, ಜಯಂತಿ ಬಂಗೇರ, ಸಾವಿತ್ರಿ ಶೆಟ್ಟಿ, ಕಸ್ತೂರಿ ಪಂಜ ಹಾಗೂ ಸುನಂದ ಎಂ. ಅಮೀನ್ ರವರಿಗೆ "ತುಳುಅಪ್ಪೆಸಿರಿ" ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಕಾರ್ಯಕ್ರಮದಲ್ಲಿ ವೆಂಕಟೇಶ್ ಭಟ್, ಚಂದ್ರಶೇಖರ ಸುವರ್ಣ, ಹರ್ಷರಾಜ್ ಶೆಟ್ಟಿ, ಸುಜಿತ್ ಸಾಲ್ಯಾನ್, ಜೇಮ್ಸ್ ಪೀಟರ್ ಡಿ, ಸೋಜ, ಭುಜಂಗ ಕವತ್ತಾರ್, ವಾಮನ ಕೋಟ್ಯಾನ್, ಶಮಿನ ಆಳ್ವ, ಗೀತಾ ಲಕ್ಷ್ಮೀಶ್, ಉದಯ್ ಶೆಟ್ಟಿ, ಜಯಪಾಲ ಶೆಟ್ಟಿ ಐಕಳ, ಕಿಶೋರ್ ಶೆಟ್ಟಿ, ಉದಯ್ ಶೆಟ್ಟಿ, ರವೀಶ್ ಕಾಮತ್ ಕಕ್ಕ, ಪ್ರಶಾಂತ್ ಶೀತಲ್ ಸುಶೀಲ್ ಹಾಗೂ ಮುರಲೀಧರ ಭಂಡಾರಿ, ದಿನೇಶ್ ಶೆಟ್ಟಿ,ಸಾಧು ಅಂಚನ್ ಉಪಸ್ಥಿತರಿರುವರು. ಶೆಟ್ಟಿ, ಅರುಣಾ, ಪುರಂದರ್ ಎಲ್. ಶೆಟ್ಟಿ, ರೋಹಿಣಿ ಬಿ. ಶೆಟ್ಟಿ, ಶಶಿಕಲ ಯದೀಶ್ ಅಮೀನ್, ಚಂದ್ರಕಲ ಶೆಟ್ಟಿ, ಉಪಸ್ಥಿತರಿರುವರು ಎಂದು ಅವರು ತಿಳಿಸಿದರು
ಕಾರ್ಯಕ್ರಮ ನಿರ್ವಹಣೆಯನ್ನು ನವೀನ್ ಶೆಟ್ಟಿ ಎಡ್ಮೆಮಾರ್ ನಡೆಸಲಿದ್ದು, ತುಳು ಅಭಿಮಾನಿಗಳು, ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಭಾನುಮತಿ ಶೆಟ್ಟಿ ಕಕ್ವಗುತ್ತು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿ ತುಳು ಭಾಷೆ ರಾಜ್ಯಭಾಷೆಯಾಗಬೇಕು ಹಾಗೂ ಹಿಂದಿನ ಕಾಲದ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಯುವ ಜನಾಂಗಕ್ಕೆ ತಿಳಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು
ಪತ್ರಿಕಾಗೋಷ್ಠಿಯಲ್ಲಿ ಮುಲ್ಕಿ ಬಿಲ್ಲವ ಸಂಘದ ಮಹಿಳಾ ಮಂಡಳಿಯ ಗೌರವಾಧ್ಯಕ್ಷೆ ಸರೋಜಿನಿ ಸುವರ್ಣ, ತುಳುವ ಮಹಾಸಭೆಯ ಪ್ರಧಾನ ಕಾರ್ಯದರ್ಶಿ ವಸಂತ್ ರೈ ಕುತ್ತೆತ್ತೂರು, ಸಂಚಾಲಕ ಅರವಿಂದ ಬೆಲ್ಬಡ, ಕಾರ್ಯದರ್ಶಿ ಹರಿಪ್ರಸಾದ್ ರೈ, ವಿಚಾರ ಸಂಕಿರಣದ
ಪ್ರಧಾನ ಕಾರ್ಯದರ್ಶಿ ಗೀತಾ ಗಣೇಶ್ ಬಂಗೇರ, ಕೋಶಾಧಿಕಾರಿ ಲತಾ ಶೇಖರ್ ಪೂಜಾರಿ ,ಹರ್ಷರಾಜ್ ಶೆಟ್ಟಿ ಜಿ. ಯಂ. ಮೊದಲಾದವರು ಉಪಸ್ಥಿತರಿದ್ದರು