Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮೇ 29 ರಿಂದ ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಂಮೀಂದ್ರ ತೀರ್ಥ ಸ್ವಾಮೀಜಿ ಮೂಲ್ಕಿ ಮೊಕ್ಕಾಂ

ಮೂಲ್ಕಿ:ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಯಮೀಂದ್ರ ತೀರ್ಥ ಸ್ವಾಮೀಜಿ ಯವರು ಮೂಲ್ಕಿ ಮೊಕ್ಕಾಂಗಾಗಿ ಶುಕ್ರವಾರ ಸಂಜೆ 6 ಗಂಟೆಗೆ ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಆಗಮಿಸಲಿದ್ದಾರೆ.
ಶ್ರೀ ದೇವರ ಭೇಟಿ, ಶ್ರೀಗಳಿಗೆ ಪಾದಪೂಜೆಯ ಬಳಿಕ ಶ್ರೀಕ್ಷೇತ್ರದ ಶ್ರೀ ವ್ಯಾಸಮಹರ್ಷಿ ವೇದಪಾಠ ಶಾಲೆಗೆ ಭೇಟಿ ನೀಡಲಿದ್ದಾರೆ.
ಮೇ 30  ಶನಿವಾರ ಶ್ರೀಗಳಿಂದ ಶ್ರೀದೇವರಿಗೆ ಪೂಜೆ, ಬಳಿಕ ಶತ ಚಂಡಿಕಾ ಹವನ, ಶ್ರೀದೇವರಿಗೆ ಮಹಾ ನೈವೇದ್ಯ, ಮಹಾಮಂಗಳಾರತಿ, ಶ್ರೀಗಳಿಂದ ಸಂಸ್ಥಾನ ದೇವರಿಗೆ ಪೂಜೆ, ಶ್ರೀಗಳಿಗೆ ಭಿಕ್ಷಾ ಸೇವೆ, ಭೂರಿ ಸಮಾರಾಧನೆ.
ಸಾಯಂಕಾಲ ಸಭಾ ಕಾರ್ಯಕ್ರಮ ಶ್ರೀಗಳಿಂದ ಆಶೀರ್ವಚನ, ರಾತ್ರಿ ಪೂಜೆ, ಪ್ರಸಾದಗ್ರಹಣ.
ಮೇ 31 ಆದಿತ್ಯವಾರ ಶ್ರೀ ವಿಷ್ಣು ಸಹಸ್ರನಾಮ ಕದಳೀ ಹವನ, ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಮತ್ತು ಶ್ರೀ ವೇದವ್ಯಾಸ ಸಹಸ್ರನಾಮ ಪಠಣ, ಹವನ ಪೂರ್ಣಾಹುತಿ, ಶ್ರೀದೇವರಿಗೆ ಮಹಾ ನೈವೇದ್ಯ, ಮಹಾಮಂಗಳಾರತಿ, ಶ್ರೀಗಳಿಂದ ಸಂಸ್ಥಾನ ದೇವರಿಗೆ ಪೂಜೆ, ಶ್ರೀಗಳಿಗೆ ಭಿಕ್ಷಾ ಸೇವೆ, ಭೂರಿ ಸಮಾರಾಧನೆ. ರಾತ್ರಿ ಪೂಜೆ, ಪ್ರಸಾದಗ್ರಹಣ.
ಜೂ1 ಮಠದಲ್ಲಿ ಶ್ರೀದೇವರಿಗೆ ಉಷಾ ಪೂಜೆ, ಬೆಳಿಗ್ಗೆ 8:30 ಕ್ಕೆ ಸಂಸ್ಥಾನದ ಪಟ್ಟದ ದೇವರ ಸಮೇತ ಶ್ರೀಗಳು ದೇವಾಲಯಕ್ಕೆ ಚಿತೈಸಿ 11ಗಂಟೆಗೆ ಸಂಸ್ಥಾನ ದೇವರಿಗೆ ಅಲಂಕಾರ ನಿತ್ಯಪೂಜೆ ಶ್ರೀದೇವರಿಗೆ ಮತ್ತು ಸಂಸ್ಥಾನ ದೇವರಿಗೆ ಏಕಕಾಲದಲ್ಲಿ ಮಹಾ ಪೂಜೆ, ನೈವೇದ್ಯ ಮಹಾಮಂಗಳಾರತಿ, ಸಂಸ್ಥಾನ ದೇವರಿಗೆ ಮತ್ತು ಶ್ರೀಗಳವರಿಗೆ ಸುವರ್ಣ ನಾಣ್ಯ ಸಹಿತ ಬೆಳ್ಳಿಯ ಕಲಶ ಸಮರ್ಪಣೆ. ಭೋಜನ ಪ್ರಸಾದ. ಸಾಯಂಕಾಲ ಶ್ರೀಗಳನ್ನು ಕೋಟಾ ಮೊಕ್ಕಾಂಗಾಗಿ ಬೀಳ್ಕೊಡುಗೆ ನಡೆಯಲಿದೆ ಎಂದು ಶ್ರೀಕ್ಷೇತ್ರದ ಪ್ರಕಟಣೆ ತಿಳಿಸಿದೆ.