Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ: ಮಾನಸಿಕ ಖಿನ್ನತೆ-ಯುವಕ ಆತ್ಮಹತ್ಯೆ



ಮುಲ್ಕಿ:ಪೊಲೀಸ್ ಠಾಣಾ ವ್ಯಾಪ್ತಿಯ ಕೆಎಸ್ ರಾವ್ನಗರದ ವಿಜಯಪುರ ಕಾಲೋನಿಯಲ್ಲಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ 
ಮೃತ ಯುವಕನನ್ನು ಕಲ್ಬುರ್ಗಿ ಜಿಲ್ಲೆಯ ಎಡ್ರಾಮಾ ತಾಲೂಕು ಕುಕ್ಕುನೂರು ನಿವಾಸಿ ಭೀಮಾ ಶಂಕರ್ (32)ಎಂದು ಗುರುತಿಸಲಾಗಿದೆ 
ಮೃತ ಭೀಮಾ ಶಂಕರ್ ಕೂಲಿ ಕೆಲಸ ಮಾಡಿಕೊಂಡಿದ್ದು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಸೋಮವಾರ ರಾತ್ರಿ ತನ್ನ ಮನೆಯ ಕೋಣೆಯ ಪಕ್ಕಾಸಿಗೆ ಬೈಲಾಸಿನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ 
ಮೃತರ ಮಾವ ಸಿದ್ದಣ್ಣ ನೀಡಿದ ದೂರಿನಂತೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಸ್ಥಳಕ್ಕೆ ಮುಲ್ಕಿ ನಗರ ಪಂಚಾಯಿತಿ ಮಾಜೀ  ಸದಸ್ಯ ಮಂಜುನಾಥ ಕಂಬಾರ, ಗೊಳಾಲಪ್ಪ, ಭೀಮಾ ಶಂಕರ್ ಆರ್.ಕೆ. ಸಾಮಾಜಿಕ ಕಾರ್ಯಕರ್ತ ಪ್ರಸಾದ್ ಪೂಜಾರಿ ಭೇಟಿ ನೀಡಿ ಅಂತಿಮ ವಿಧಿ ವಿಧಾನಗಳಿಗೆ ಸಹಕರಿಸಿದ್ದಾರೆ