Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಿನ್ನಿಗೋಳಿಯಲ್ಲಿ ಕಸಾಪ ಸಂಸ್ಥಾಪನ ದಿನಾಚರಣೆ

ಕಟೀಲು : ಪುಸ್ತಕಗಳನ್ನು ಓದುವ ಹವ್ಯಾಸ ರೂಡಿಸಿಕೊಳ್ಳಿ,ಪುಸ್ತಕಗಳು  ಜ್ಞಾನದ ಭಂಡಾರವಾಗಿದ್ದು,ಮಾನಸಿಕ,ಭೌಧಿಕ ಮತ್ತು ಭಾವನಾತ್ಮಕ ಬೆಳವಣಿಗೆಗೆಗೆ ಅತ್ಯಂತ ಅವಶ್ಯಕ.ಇಂತಹ ಕಾರ್ಯವನ್ನು ಸಾಹಿತ್ಯ ಪರಿಷತ್ ಮಾಡುತ್ತಿರುವುದು ಸಂತಸದ ವಿಚಾರ  ಎಂದು ಕಿನ್ನಿಗೋಳಿ ಪಟ್ಟಣ ಪಂಚಾಯತ್‌  ನ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ ಹೇಳಿದರು.

ಅವರು ಮಂಗಳವಾರದಂದು  ಕಿನ್ನಿಗೋಳಿ ಪಟ್ಟಣ ಪಂಚಾಯತ್ ಗ್ರಂಥಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನದ ಆಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ  ಮಾತನಾಡಿದರು. ಈ ವೇಳೆ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಗ್ರಂಥಾಲಯ ಹಾಗೂ ಮೆನ್ನಬೆಟ್ಟು ಗ್ರಂಥಾಲಯವನ್ನು ಹೆಚ್ಚು ಉಪಯೋಗಿಸುವ ಓದುಗರಿಗೆ ರೂಪಾಯಿ ಒಂದು ಸಾವಿರ ಮೌಲ್ಯದಂತೆ ಪುಸ್ತಕಗಳನ್ನು ವಿತರಿಸಲಾಯಿತು. 
ಸಾಹಿತಿ ಉದಯಕುಮಾರ ಹಬ್ಬು, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸದಸ್ಯರಾದ ಪ್ರಣಿಕ್, ಕಸಾಪ ಕಾರ್ಯದರ್ಶಿಗಳಾದ ಹೆರಿಕ್ ಪಾಯಸ್, ಗ್ರಂಥಪಾಲಕರಾದ ಶ್ರೀಮತಿ ರಮಣಿ, ಶಶಿಕಲಾ ಕೆಮ್ಮಡೆ, ಕಸಾಪ ಮೂಲ್ಕಿ ಘಟಕಾಧ್ಯಕ್ಷ ಮಿಥುನ ಕೊಡೆತ್ತೂರು ಹಾಗೂ ಮೊದಲಾದವರು ಉಪಸ್ಥಿತರಿದ್ದರು.  ಕಸಾಪ ಕಾರ್ಯದರ್ಶಿ ಹಾಗೂ ಪಟ್ಟಣ ಪಂಚಾಯತ್‌ ಸದಸ್ಯ ಪ್ರಕಾಶ್ ಆಚಾರ್  ಕಾರ್ಯಕ್ರಮ ನಿರೂಪಿಸಿದರು.