Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಶ್ರೀನಿವಾಸ ಭಜನಾ ಮಂಡಳಿ ವಾರ್ಷಿಕೋತ್ಸವ



ಕಿನ್ನಿಗೋಳಿ: ಕೊಡೆತ್ತೂರು ಶ್ರೀನಿವಾಸ ಭಜನಾ ಮಂಡಳಿಯ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಸರಾಫ್ ಅಣ್ಣಯ್ಯಚಾರ್ಯ ಸಭಾಭವನ ದಲ್ಲಿ ನೆರವೇರಿತು.  ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ 8 ನೇ ಸ್ಥಾನ ಪಡೆದ ಅನ್ಯ ಆಚಾರ್ಯ ಕಿನ್ನಿಗೋಳಿ ಇವರನ್ನು ಸನ್ಮಾನಿಸಲಾಯಿತು. ತಂಡದ ಸಾಧಕರಾದ ಸಾಕ್ಷಿ, ಸಮೀಕ್ಷಾ, ಶ್ರಾವ್ಯ, ಸೃಷ್ಟಿ, ಪ್ರತೀಕ್ಷಾ ಇವರನ್ನು ಸನ್ಮಾನಿಸಲಾಯಿತು. ತಂಡದ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಪುಸ್ತಕ ವಿತರಣೆ ಮಾಡಲಾಯಿತು.  ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗುರುರಾಜ್ ಮಲ್ಲಿಗೆಯಂಗಡಿ, ಉಪಾಧ್ಯಕ್ಷರಾದ ಶ್ರೀಮತಿ ಪದ್ಮಲತಾ ರಾವ್, ಸದಸ್ಯರಾದ ದಾಮೋದರ್ ಶೆಟ್ಟಿ, ಪ್ರಕಾಶ್ ಆಚಾರ್ಯ, ಧನುಷ್, ಪ್ರಣೀಕ್, ಶೈಲೇಶ್, ಮಲ್ಲಿಕಾ ಕಿಲೆಂಜೂರ್, ಗೋಪಾಲ ಕೃಷ್ಣ, ಶ್ರೀಮತಿ ಕೋಕಿಲ, ಚಂದ್ರ ರಾಣ್ಯ, ವಿಶ್ವ ಬ್ರಾಹ್ಮಣ ಸಂಘದ ಅಧ್ಯಕ್ಷ ಜಗದೀಶ್ ಆಚಾರ್ಯ, ಅನಂತ ಪ್ರಕಾಶದ  ಸಚ್ಚಿದಾನಂದ ಉಡುಪ, ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.