Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್(ರಿ) ಮಂಗಳೂರು ಇದರ ಕಿನ್ನಿಗೋಳಿ ಘಟಕದ ಪ್ರಥಮ ವಾರ್ಷಿಕೋತ್ಸವ ಸಮಾರಂಭ

ಕಿನ್ನಿಗೋಳಿ  :  ಪಟ್ಲ ಫೌಂಡೇಶನ್ ಮೂಲಕ ಕಲಾವಿದರ ಬಾಳು ಬೆಳಗಾಗುತ್ತಿದೆ. ಸಾವಿರಾರು ಕಲಾವಿದರು ಪಟ್ಲ ಫೌಂಡೇಶನ್ ನ ಮೂಲಕ ಸಹಕಾರ ಪಡೆದಿರುವುದು ಅಭಿನಂದನೀಯ ಎಂದು ಕಟೀಲು ದೇವಳದ ಪ್ರಧಾನ  ಅರ್ಚಕ ಲಕ್ಷೀನಾರಾಯಣ ಆಸ್ರಣ್ಣ  ಹೇಳಿದರು. ಅವರು ಕಿನ್ನಿಗೋಳಿಯಲ್ಲಿ ನಡೆದ  ಯಕ್ಷ ಧ್ರುವ  ಪಟ್ಲ ಫೌಂಡೇಶನ್ ಟ್ರಸ್ಟ್(ರಿ) ಮಂಗಳೂರು ಇದರ  ಕಿನ್ನಿಗೋಳಿ ಘಟಕದ ಪ್ರಥಮ  ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
 ಕಿನ್ನಿಗೋಳಿ ಘಟಕದ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
 ಈ ಸಂದರ್ಭ ಪಟ್ಲ ಫೌಂಡೇಶನ್ ಟ್ರಸ್ಟ್ ನ  ಸ್ಥಾಪಕಾಧ್ಯಕ್ಷ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಪಟ್ಲ ಫೌಂಡೇಶನ್ನಿನ ಟ್ರಸ್ಟಿಗಳಾದ ಸಿತ್ಲ ದಿವಾಕರ ರಾವ್,  
ಭುವನಾಭಿರಾಮ ಉಡುಪ, ಪೃಥ್ವಿರಾಜ್‌ ಆಚಾರ್ಯ, ಉದ್ಯಮಿ ಧನಪಾಲ್ ಶೆಟ್ಟಿ ತಾಳಿಪಾಡಿಗುತ್ತು, ಎಂ.ಅರ್.ಪಿ.ಎಲ್ ನ   ಜನರಲ್ ಮ್ಯಾನೇಜರ್  ಸತೀಶ್ ಎಂ, ಕಿನ್ನಿಗೋಳಿ ಪಟ್ಟಣ ಪಂಚಾಯತ್'ನ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ, ಜಯ ಚೌಟ, ಸ್ವರಾಜ್ ಶೆಟ್ಟಿ ಮುಂಡ್ಕೂರು, ಮಂಜುನಾಥ್,ಮೋಹನ್  ಮೂರುಕಾವೇರಿ, ದೇವಿಪ್ರಸಾದ್ ಶೆಟ್ಟಿ ದೇವಸ್ಯ, ದಾಮೋದರ ಶೆಟ್ಟಿ ಕೊಡೆತ್ತೂರು, ಶರತ್ ಕಾರ್ನಾಡ್, ಶ್ರೀಶ ಸರಫ್ ಐಕಳ ಹಾಗೂ 
ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯಕ್ಷಗಾನ ತಾಳಮದ್ದಳೆ ಅರ್ಥದಾರಿ ಶ್ರೀಧರ ಶೆಟ್ಟಿ ಕೊಕ್ಕಾರುಗುತ್ತು ಹಾಗೂ ಪಾವಂಜೆ ಮೇಳದ ಹಾಸ್ಯಗಾರ ಸಂದೇಶ ಮಂದಾರ ಇವರನ್ನು ಸಂಮಾನಿಸಲಾಯಿತು.
 ಶಶಿಕಾಂತ್ ಶೆಟ್ಟಿ ಕಾರ್ಕಳ ಮತ್ತು  ಶಶಿಕಲಾ ಇವರಿಗೆ ವೈದ್ಯಕೀಯ ನೆರವು ಹಾಗೂ ಕುಮಾರಿ ಅನ್ಯ ಆಚಾರ್ಯ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪಟ್ಲ ಫೌಂಡೇಶನ್ ನ ಸ್ಥಾಪಕಾಧ್ಯಕ್ಷ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಯವರನ್ನು  ವಿಶೇಷವಾಗಿ ಗೌರವಿಸಲಾಯಿತು. ದಿವಾಕರ ಕರ್ಕೇರ ಸನ್ಮಾನ‌ಪತ್ರ ವಾಚಿಸಿದರು, ಸಾಯಿನಾಥ ಶೆಟ್ಟಿ ಮುಂಡ್ಕೂರು ಸ್ವಾಗತಿಸಿ
ಶರತ್ ಶೆಟ್ಟಿ ಕಿನ್ನಿಗೋಳಿ ಕಾರ್ಯಕ್ರಮ ನಿರೂಪಿಸಿ  ವಂದಿಸಿದರು.  ಪಾವಂಜೆ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು.