Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಬಾವಿಗೆ ಬಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

ಕಿನ್ನಿಗೋಳಿ:ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಿಲೆಂಜೂರಿನಲ್ಲಿ ಪಟ್ಟಣ ಪಂಚಾಯತ್  ನ ಬಾವಿಗೆ ಬಿದ್ದ ರಾಷ್ಟ್ರ ಪಕ್ಷಿ ನವಿಲನ್ನು ಸಾಮಾಜಿಕ ಕಾರ್ಯಕರ್ತ, ಪ್ರಾಣಿಪಕ್ಷಿ ರಕ್ಷಕ ಅರುಣ್ ಮಲ್ಲಿಗೆಯಂಗಡಿ  ರಕ್ಷಿಸಿದ್ದಾರೆ,   ಸೋಮವಾರ ಬೆಳಿಗ್ಗೆ ಪಂಚಾಯತ್ ಸಿಬ್ಬಂದಿ ಬಾಲಕೃಷ್ಣ ಅವರು ನವೀಲು ಬಾವಿಯೊಳಗೆ ಬಿದ್ದಿರುವುದನ್ನು ಗಮನಿಸಿ ಕೂಡಲೇ ಪಂಚಾಯತ್ ಗೆ ಮಾಹಿತಿ ನೀಡಿ
ಅರುಣ್ ಮಲ್ಲಿಗೆಯಂಗಡಿಗೆ ತಿಳಿಸಿದ್ದಾರೆ.ಕೂಡಲೇ ಅಳವಾದ ಬಾವಿಗಿಳಿದ ಅರುಣ್ ಬುಟ್ಟಿಯ ಮೂಲಕ ಪಂಚಾಯತ್ ಸಿಬ್ಬಂದಿ  ಬಾಲಕೃಷ್ಣ ಅವರ ಸಹಕಾರದೊಂದಿಗೆ‌ ಮೇಲಕ್ಕೆಳೆದು ನವಿಲನ್ನು ರಕ್ಷಿಸಿದ್ದಾರೆ. 
ಪ್ರಾಣಿ ಪಕ್ಷಿಗಳ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಅರುಣ್ ಈ ಅನೇಕ ಇಂತಹ ಕೆಲಸಗಳನ್ನು ಮಾಡಿ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅಪಘಾತಕೊಳಗಾದ  ಬೀದಿನಾಯಿ, ಬೆಕ್ಕುಗಳಿಗೆ ಚಿಕಿತ್ಸೆ ನೀಡಿ ವಿಶೇಷ ಕಾಳಜಿ ವಹಿಸುವವರಾಗಿದ್ದಾರೆ.