ಗಂಜಿಮಠ ಶ್ರೀ ಮೃತ್ಯುಂಜಯೇಶ್ವರ ಗರ್ಭಗುಡಿಗೆ ಷಡಾಧಾರ ಪ್ರತಿಷ್ಠೆ
ಕೈಕಂಬ:ಗಂಜಿಮಠದಲ್ಲಿ ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಪುನರ್ ನಿರ್ಮಾಣದ ಪ್ರಯುಕ್ತ ಶ್ರೀ ದೇವರ ಗರ್ಭಗುಡಿಗೆ ನಿಧಿಕುಂಭ ಪೂರ್ವಕ ಷಡಾಧಾರ ಪ್ರತಿಷ್ಠೆಯು ಸೋಮವಾರ ನೆರವೇರಿತು.
ಬಡಗ ಎಡಪದವು ವೇದಮೂರ್ತಿ ಶ್ರೀ ಟಿ. ಮುರಳೀಧರ ತಂತಿಗಳ ನೇತೃತ್ವದಲ್ಲಿ ವೈದಿಕ ವಿಧಿವಿಧಾನಗಳು ನಡೆದು ಬೆಳಿಗ್ಗೆ 9-15ರ ವೃಷಭ ಲಗ್ನ ಸುಮೂಹೂರ್ತದಲ್ಲಿ ನಿಧಿಕುಂಭ ಪೂರ್ವಕ ಷಡಾಧಾರ ಪ್ರತಿಷ್ಠೆ ನಡೆಸಲಾಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು ಪ್ರಮುಖರಾದ ಭಾಸ್ಕರ್ ಭಟ್ ಗಂಜಿಮಠ,
ರಮೇಶ್ ಆಚಾರ್ಯ ನಾರಳ,ಸೂರ್ಯ ಭಟ್,
ಗಣೇಶ್ ಭಟ್ ಗಂಜಿಮಠ,
ಚಂದ್ರಹಾಸ್ ಶೆಟ್ಟಿ ನಾರಳ,
ಸೋಹನ್ ಅತಿಕಾರಿ,
ಸುಧೀರ್ ನಾಯ್ಕ್,
ಹರೀಶ್ ಕಾಮತ್ ಗಂಜಿಮಠ,
ಸುನೀಲ್ ಜಿ., ಶೃತಾಂಜನ್ ಜೈನ್,
ಸಚಿನ್ ಅಡಪ ಹಾಗೂ ಭಕ್ತರು ಪಾಲ್ಗೊಂಡಿದ್ದರು.