Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಟೀಲು ದೇಗುಲಕ್ಕೆ ಸಚಿವ ಈಶ್ವರ ಖಂಡ್ರೆ ಭೇಟಿ



ಕಟೀಲು ಶ್ರೀ ದುರ್ಗಾಪರಮೇಶ್ವರಿ  ದೇಗುಲಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೋಮವಾರ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು, ಕೃಷ್ಣರಾಜ ತಂತ್ರಿ ಅವರಿಂದ ಪ್ರಸಾದ ಸ್ವೀಕರಿಸಿದರು.
ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ, ಶ್ರೀಹರಿನಾರಾಯಣದಾಸ ಅಸ್ರಣ್ಣ ಸಚಿವರನ್ನು ಸ್ವಾಗತಿಸಿ, ದೇಗುಲದ ಕುರಿತಾಗಿ ಮಾಹಿತಿ ನೀಡಿದರು. 
ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೆನ್ ಪಿ. ಅಧಿಕಾರಿ ಶ್ರೀಧರ, ಗೇರು ಅಭಿವೃದ್ಧಿ ನಿಗಮದ ಮಮತಾ ಗಟ್ಟಿ ಮತ್ತಿತರರಿದ್ದರು.