Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ನಿಧನ ವಾರ್ತೆ:ಚಂದ್ರಕಾಂತ ನಾಯಕ್


ಕಟೀಲು : ಚಂದ್ರಕಾಂತ ನಾಯಕ್ (73 ವರ್ಷ) ಶನಿವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಆರ್‌ಎಸ್‌ಎಸ್ ಕಾರ್ಯಕರ್ತರಾಗಿದ್ದ ಅವರು ಕಟೀಲು ದೇಗುಲದ ಭಜನಾ ಮಂಡಳಿಯಲ್ಲಿ ತೊಡಗಿಸಿಕೊಂಡಿದ್ದರು. ಚಂದ್ರಕಾಂತ ಸೇವಾಶ್ರಮದ ಮೂಲಕ ಸಭಾಭವನ ನಿರ್ಮಿಸಿದ್ದರು. ವರ್ಷಂಪ್ರತಿ ಕೃಷಿಕರನ್ನು ಸಂಮಾನಿಸುತ್ತಿದ್ದರು. ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದರು. ಮೃತರು ಪತ್ನಿ, ಈರ್ವರು ಗಂಡು ಮಕ್ಕಳನ್ನು ಅಗಲಿದ್ದಾರೆ.