Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಟೀಲಿನಲ್ಲಿ ಹಿಂದೂ ಧಾರ್ಮಿಕ ಶಿಬಿರ ಸಮಾರೋಪ


ಕಟೀಲು : ದೇವರು ನಂಬಿದವರನ್ನು ಕೈಬಿಡಲಾರರು. ದಿನಂಪ್ರತಿ ಒಂದಿಷ್ಟು ಹೊತ್ತು ದೇವರನ್ನು ಪ್ರಾರ್ಥಿಸುವುದಕ್ಕಾಗಿ ಮೀಸಲಿಡಿ. ನಂಬಿಕೆಯಿಟ್ಟು ಭಜಿಸಿ. ಪ್ರಾರ್ಥಿಸಿ. ದೇವರು ಒಲಿದು, ಮುನ್ನಡೆಸುತ್ತಾರೆ. ಎಂದು ವಿದ್ವಾಂಸ ಕುತ್ಪಾಡಿ ಕೃಷ್ಣರಾಜ ಭಟ್ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಶ್ರಯದಲ್ಲಿ ಪೇಜಾವರ ಮಠದ ಸಹಯೋಗದಲ್ಲಿ ಒಂದು ವಾರಗಳ ಕಾಲ ನಡೆದ ಹಿಂದೂ ಧಾರ್ಮಿಕ ಶಿಬಿರದಲ್ಲಿ ಮಾತನಾಡಿದರು.
ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ದೇಗುಲದ ಆಡಳಿತ ಸಮಿತಿ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ, ಕ್ಯಾಪ್ಸ್ ಪೌಂಡೇಶನ್ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಶಿಕ್ಷಕರಾದ ಶ್ರೀವತ್ಸ, ಶೈಲಜಾ, ರಾಜೇಶ್ ಐ, ಕುಸುಮಾವತಿ ಮತ್ತಿತರರಿದ್ದರು.
ಶಿಬಿರದಲ್ಲಿ ೭೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಶಿಬಿರದ ಅನುಭವಗಳನ್ನು ಹೇಳಿದರು. ಪ್ರಾರ್ಥನಾ ಸ್ತೋತ್ರಗಳು, ಭಜನೆ, ಪುರಾಣ ಕಥೆಗಳು, ಧಾರ್ಮಿಕ ಹಬ್ಬಗಳ ಮಹತ್ವ, ಕ್ಷೇತ್ರ ಸಂದರ್ಶನ, ದೇಸೀ ಕ್ರೀಡೆಗಳು ಹೀಗೆ ವಿದ್ಯಾರ್ಥಿಗಳಿಗೆ ಸಾಕಷ್ಟು ತರಬೇತಿ ನೀಡಲಾಯಿತು.