ಮಣಿಪಾಲ ವಿಶ್ವವಿದ್ಯಾಲಯದ ಅಂಗ ಸಂಸ್ಥೆ,ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆ ಕಟೀಲು, 6ನೆ ವರ್ಷದ ಹಾಸ್ಪಿಟಲ್ ಡೇ ಸಂಭ್ರಮ
ಕಟೀಲು:ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆ ಕಟೀಲು (ಕೆ. ಎಮ್. ಸಿ.) ಆಸ್ಪತ್ರೆ ಕಟೀಲು 6ನೆ ವರ್ಷದಸಂಭ್ರಮಾಚರಣೆಯು ನಡೆಯಿತು. ಈ ಸಂದರ್ಭ
ಕಟೀಲು ಪರಿಸರದ ವೈದ್ಯರಿಗೆ, ಅರೋಗ್ಯ ಶಿಬಿರ ಆಯೋಜಕರಿಗೆ ಮತ್ತು ಆಶಾ ಕಾರ್ಯಕರ್ತರಿಗೆ ಗೌರವ ನೀಡಲಾಯಿತು.
ಕಟೀಲು ಆಸ್ಪತ್ರೆ ನಡೆದು ಬಂದ ಹಾದಿ, ಗ್ರಾಮೀಣ ಭಾಗದ ಆಸ್ಪತ್ರೆ ಅಲ್ಪಾವಧಿಯಲ್ಲಿ ಸಾಧಿಸಿದ ಸಾಧನೆ ಮತ್ತು ಸೇವಾ ಚಟುವಟಿಕೆಯ ಬಗ್ಗೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ ಶಿವಾನಂದ ಪ್ರಭು ರವರು ಮಾಹಿತಿ ನೀಡಿದರು
ಮಣಿಪಾಲ ಭೋದನಾ ವಿಶ್ವವಿದ್ಯಾಲಯದ ಮುಖ್ಯ ಆಡಳಿತಾಧಿಕಾರಿ ಡಾ ಸುಧಾಕರ್ ಕಂಠಿಪುಡಿ ,
ಕೆ ಎಮ್ ಸಿ ಆಸ್ಪತ್ರೆ ಅತ್ತಾವರದ ವೈದ್ಯಕೀಯ ಅಧೀಕ್ಷಕ ಡಾ ಚಕ್ರಪಾಣಿ ಎಮ್ ಈ ಸಂದರ್ಭ ಉಪಸ್ಥಿತರಿದ್ದರು
ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಕಟೀಲು ಕೆ ಎಮ್ ಸಿ ಆಸ್ಪತ್ರೆಯ ಸಿಬ್ಬಂದಿ ವರ್ಗದವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.