Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಟೀಲು: ದುರ್ಗಾನಗರ ಫ್ರೆಂಡ್ಸ್ ಕ್ಲಬ್ ಕೊಂಡೇಲ‌ ತಂಡದ ವತಿಯಿಂದ 5ನೇ ವರುಷದ ಪುಸ್ತಕಾ ವಿತರಣಾ ಕಾರ್ಯಕ್ರಮ

ಕಟೀಲು: ದುರ್ಗಾನಗರ ಫ್ರೆಂಡ್ಸ್ ಕ್ಲಬ್ ಕೊಂಡೇಲ‌ ತಂಡದ ವತಿಯಿಂದ  5ನೇ ವರುಷದ ಪುಸ್ತಕಾ ವಿತರಣಾ ಕಾರ್ಯಕ್ರಮ ಭ್ರಾಮರಿ ಸಭಾ ಭವನ ಪೂಪಾಡಿಕಲ್ಲ್ ಮಲ್ಲಿಗೆಯಂಗಡಿಯಲ್ಲಿ ನಡೆಯಿತು. 
45 ಶಾಲಾಮಕ್ಕಳಿಗೆ ಪುಸ್ತಕಾ ವಿತರಣೆಯನ್ನು ಮಾಡಲಾಯಿತು.
 ಶಾಲಾ ಮಕ್ಕಳಿಗೆ ಪುಸ್ತಕಾ,ಬ್ಯಾಗ್, ನೀಡಲಾಯಿತು.
ಸಭೆಯಲ್ಲಿ ಅಂಗನವಾಡಿ ಮುಖ್ಯಶಿಕ್ಷಕಿ ಎಲ್ಸಿ ಸಿಕ್ವೇರ ಹಾಗೂ
ರಂಗಕಲಾವಿದ ನಿರೂಪಣೆಕಾರ, ದುರ್ಗಾಪ್ರಸಾದ್ ಕೊಂಡೇಲ ಇವರನ್ನು ಸಮ್ಮಾನಿಸಲಾಯಿತು.
ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ ಸದಸ್ಯ ಲೋಕಯ್ಯ ಸಾಲ್ಯಾನ್ ಕೊಂಡೇಲ, ಕಿರಣ್ ಶೆಟ್ಟಿ ಕೊಡೆತ್ತೂರು, ಶೀನ ಪೂಜಾರಿ ಐಕಳ, ಪ್ರೀತಮ್ ಬಂಗೇರ ಬಜಪೆ, ಚಂದ್ರ ಪೂಜಾರಿ ಪೆರಾರ, ಕಿರಣ್ ಪೂಜಾರಿ ಎಕ್ಕಾರ್, ಸುಮಂತ್ ಮಿಜಾರ್, ಶಿವಾನಂದ ಪೂಜಾರಿ ಕಟೀಲು ಉಪಸ್ಥಿತರಿದ್ದರು.