Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ನಾಗರೀಕ ಹೋರಾಟ ಸಮಿತಿ ಯಿಂದ ಜೋಕಟ್ಟೆಯ ಎಂ ಅರ್ ಪಿ ಎಲ್ ಕೋಕ್ ಸಲ್ಪರ್ ಘಟಕದ ಸಮೀಪ ಅನಿರ್ಧಿಷ್ಟಾವಧಿ ಹಗಲು ರಾತ್ರಿ ಧರಣೆ,ಉಸ್ತುವಾರಿ ಸಚಿವ ಗುಂಡೂರಾವ್ ಅವರಿಗೆ ಮನವಿ

ಜೋಕಟ್ಟೆ: ಅರ್ ಪಿ ಎಲ್ ಹಸಿರು ವಲಯಕ್ಕೆ ಗುರುತಿಸಿದ 27 ಎಕರೆ ಜಮೀನು ಶೀಘ್ರ ಭೂಸ್ವಾಧಿನ ನಡೆಸಲು ಒತ್ತಾಯಿಸಿ ಕೊಟ್ಟ ಭರವಸೆಯಂತೆ ಭೂಸ್ವಾಧೀನ  ಹಾಗೂ ಸಂತ್ರಸ್ಥರಿಗೆ ಪುನರ್ವಸತಿಯನ್ನು  ಕೆಐಎಡಿಬಿ  ಬದಲಿಗೆ ಜಿಲ್ಲಾಡಳಿತದ ಮೂಲಕ ನಡೆಸಲು  ಆಗ್ರಹಿಸಿ ನಾಗರೀಕ ಹೋರಾಟ ಸಮಿತಿ ಯಿಂದ  ಜೋಕಟ್ಟೆಯ ಎಂ ಅರ್ ಪಿ ಎಲ್ ಕೋಕ್ ಸಲ್ಪರ್ ಘಟಕದ ಸಮೀಪ ಅನಿರ್ಧಿಷ್ಟಾವಧಿ  ಹಗಲು ರಾತ್ರಿ ಧರಣೆಯು ನಡೆಯಿತು. ಪ್ರತಿಭಟನಾ ನಿರತ  ಸ್ಥಳಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್  ಅವರು  ಭೇಟಿ ನೀಡಿ ಎಂಅರ್ ಪಿಎಲ್  ಕೈಗಾರಿಕಾ ಮಾಲಿನ್ಯದಿಂದ ಸಂತ್ರಸ್ತರಾಗಿರುವ ಧರಣಿ‌ ನಿರತರಿಂದ ಮನವಿ ಸ್ವೀಕರಿಸಿದರು. 

ಹಸಿರು ವಲಯ ನಿರ್ಮಾಣದ ಆದೇಶ ಆಗಿ ಹತ್ತು ವರ್ಷ ದಾಟಿದರೂ ಎಂಅರ್ ಪಿ ಎಲ್  ಆದೇಶ ಕಾರ್ಯಗತ ಮಾಡದಿರುವುದರಿಂದ ಕಳೆದ 12 ವರ್ಷಗಳಿಂದ ನರಕ ಸದೃಶ ಜೀವನ ನಡೆಸುತ್ತಿರುವ ಧರಣಿ ನಿರತ ಸಂತ್ರಸ್ತರಿಗೆ ನ್ಯಾಯ ಒದಗಿಸುವ ಭರವಸೆ ನೀಡಿದರು. ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಅಂದು ಸೂಕ್ತ ತೀರ್ಮಾನ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಸೂಚಿಸುವುದಾಗಿ ಮಾಹಿತಿ ನೀಡಿದರು.