Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಸಹಕಾರ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಗ್ರಾಹಕರ ಸಹಭಾಗಿತ್ವ ಮುಖ್ಯ - ಯು.ಟಿ ಖಾದರ್

ಹಳೆಯಂಗಡಿ :ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ  5ನೇ ವರ್ಷದ ಸಂಭ್ರಮಾಚರಣೆ ಸಮಾರೋಪ  ಹಾಗೂ ಸಾಧಕರಿಗೆ ಗೌರವ ಕಾರ್ಯಕ್ರಮ
ಬುಧವಾರ  ಹಳೆಯಂಗಡಿಯ
ಹರಿಓಂ ಕಟ್ಟಡದ ಆವರಣದ ಬೃಹತ್ ವೇದಿಕೆಯಲ್ಲಿ  ನಡೆಯಿತು
 ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ ಖಾದರ್ ರವರು ದೀಪ ಪ್ರಜ್ವಲನೆ ನೆರವೇರಿಸಿ ಮಾತನಾಡಿ ಕಳೆದ 5 ವರ್ಷಗಳಿಂದ ಪ್ರಾಮಾಣಿಕತೆ ಕಠಿಣಶ್ರಮ ಹಾಗೂ ವ್ಯಕ್ತಿತ್ವವನ್ನು ರೂಪಿಸಿಕೊಂಡು ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದ್ದು ಸೊಸೈಟಿ ಅಧ್ಯಕ್ಷ ಎಚ್ ವಸಂತ್ ಬೆರ್ನಾಡ್ ರವರ ಉತ್ತಮ ಆಡಳಿತದಿಂದ ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಗ್ರಾಹಕರ ಸಹಭಾಗಿತ್ವ ಮುಖ್ಯವಾಗಿದ್ದು ಅವರ ಪ್ರೇರಣೆಯಿಂದ ಸೊಸೈಟಿ ಇಂದು ಸಾಧನೆಯ ಶಿಖರವೇರಿದೆ. ಇದು ಯಶಸ್ವಿಯಾಗಿ ಮುನ್ನಡೆದು ಸೊಸೈಟಿ ಇನ್ನಷ್ಟು ಸಾಧನೆ ಮಾಡಲಿ, ವಸಂತ್ ಬರ್ನಾಡ್ ರವರ ಎಲ್ಲಾ ಸಾಮಾಜಿಕ ಮತ್ತು ರಾಜಕೀಯ ಕಾರ್ಯಗಳಿಗೆ ನನ್ನ ಸಹಕಾರ ಬೆಂಬಲ ಸದಾ ಇದೆ ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾವಂತರು ಅರಸರು ವಹಿಸಿ ಶುಭ ಹಾರೈಸಿದರು
 ಮುಖ್ಯ ಅತಿಥಿಗಳಾಗಿ 
ಮಾಜೀ ಸಚಿವ ಕೆ. ಅಭಯಚಂದ್ರ ಜೈನ್, ಮಾತನಾಡಿದರು ಇದೇ ಸಂದರ್ಭದಲ್ಲಿ ಸೊಸೈಟಿಯಲ್ಲಿ ಅಳವಡಿಸಲಾದ ನೂತನ ಗೋಲ್ಡ್ ಪ್ಯೂರಿಟಿ ಟೆಸ್ಟಿಂಗ್ ಮೆಷಿನ್ ನ್ನು ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಸೂರ್ಯಕುಮಾ‌ರ್ ಉದ್ಘಾಟಿಸಿದರು
ಕಾರ್ಯಕ್ರಮದಲ್ಲಿ ಸೊಸೈಟಿ ಸ್ಥಾಪನಾ  ವರ್ಷದ ಸಿಬ್ಬಂದಿಗಳಿಗೆ  ರಾಜ್ಯ ಸರಕಾರದ ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ರವರು ಗೌರವ ಸಮರ್ಪಣೆ ಮಾಡಿದರು
ಮುಖ್ಯ ಅತಿಥಿಗಳಾಗಿ  ,ಕಾರ್ನಾಡ್ ಇಮ್ಯಾಕ್ಯುಲೇಟ್ ಕನ್ಯಷ್ಯನ್  ನ   ಚರ್ಚ್ ಕಾರ್ನಾಡು ಮೂಲ್ಕಿ ಚರ್ಚ್ ಪಾಲನಾ ಸಮಿತಿಯ 22 ಆಯೋಗಗಳ ಸಂಯೋಜಕ
ಪೌಲ್ ರೋಲ್ಸಿ ಡಿಕೋಸ್ಟ , ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್. ವಸಂತ್ ಬೆರ್ನಾರ್ಡ್, ಉಪಾಧ್ಯಕ್ಷ
ವಿಜಯ ಕುಮಾ‌ರ್ ಸನಿಲ್‌,ನಿರ್ದೇಶಕರಾದ ಉಮಾನಾಥ ಜೆ ಶೆಟ್ಟಿಗಾರ್,ಧನಂಜಯ ಮಟ್ಟು, ಗೌತಮ್ ಜೈನ್, ಗಣೇಶ್ ಪ್ರಸಾದ್ ದೇವಾಡಿಗ, ಜೈ ಕೃಷ್ಣ ಕೋಟ್ಯಾನ್, ಡಾ. ಶೆರಿಲ್ ಅಯೋನ, ರೇಖಾ ಶೆಟ್ಟಿ,ಹರೀಶ್ ಎನ್ ಪುತ್ರನ್, ನವೀನ್ ಸಾಲ್ಯಾನ್ ಪಂಜ, ಮೋಹನ್ ದಾಸ್, ಅನಿಲ್ ಪೂಜಾರಿ ಸಸಿಹಿತ್ಲು, ರಜಿಯಾ ಭಾನು, ಕರಿಯ ಕಾಡಿಗ ಹಾಗೂ ಹರಿ ಓಂ ಕಟ್ಟಡದ ಮಾಲಿಕ ಹರಿಶ್ಚಂದ್ರ ಕೆ ಅಮೀನ್ ಮತ್ತಿತರರು ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ತುಳುನಾಡಿನ ಚಲನಚಿತ್ರರಂಗದ ಸಾಧಕರಾದ ಅಧಿತ್ ಶೆಟ್ಟಿ ಗಾನ ಭಟ್ ಮತ್ತು ಶಿಲ್ಪಾ ಶೆಟ್ಟಿ ರವರನ್ನು ಗೌರವಿಸಲಾಯಿತು
ಸೊಸೈಟಿ ಅಧ್ಯಕ್ಷ ಎಚ್ ವಸಂತ್ ಬೆರ್ನಾಡ್ ಸ್ವಾಗತಿಸಿದರು,ಮುಖ್ಯ ಕಾರ್ಯನಿರ್ವಣಾಧಿಕಾರಿ
ಸುದರ್ಶನ್  ಧನ್ಯವಾದ ಅರ್ಪಿಸಿದರು , ಸೊಸೈಟಿಯ ಕಿನ್ನಿಗೋಳಿ ಶಾಖಾ ಪ್ರಬಂಧಕಿ ಅಕ್ಷತಾ ಶೆಟ್ಟಿ ಎಂ ಹಾಗೂ ಖ್ಯಾತ ನಿರೂಪಕಿ ಸೌಜನ್ಯಾ ಹೆಗ್ಡೆ, ಲೆಕ್ಕಿಗರಾದ ಲೋಲಾಕ್ಷಿ , ಪ್ರಬಂಧಕರಾದ ಮೋಹನ್ದಾಸ್ ಪೂಜಾರಿ ಮತ್ತು ಅಂಜಲಿ ಉಳ್ಳಾಲ್  ನಿರೂಪಿಸಿದರು
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು