Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಪ್ರಿಯದರ್ಶಿನಿ ಸೊಸೈಟಿಯ ಸಮಾಜಮುಖಿ ಕಾರ್ಯಗಳು ಶ್ಲಾಘನೀಯ

ಹಳೆಯಂಗಡಿ:  ಆರೋಗ್ಯ, ಸಹಾಯ ಹಸ್ತ ಸಹಿತ ಅನೇಕ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತ ಬಂದಿರುವ 
ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್‌ ಸೊಸೈಟಿಯ ಕಾರ್ಯ  ಅಭಿನಂದನೀಯ ಎಂದು ಕಿನ್ನಿಗೋಳಿ ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು. 
ಅವರು   ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್‌ ಸೊಸೈಟಿಯ 5ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್‌ ರಿ., ಮುಲ್ಕಿ ಅರಮನೆ ವೆಲ್ವೇರ್ ಆಂಡ್‌  ಚಾರಿಟೇಬಲ್ ಟ್ರಸ್ಟ್ (ರಿ) ಮುಲ್ಕಿ ಪ್ರೆಸ್ ಕ್ಲಬ್ , ಪೂಜಾ ಫ್ರೆಂಡ್ಸ್ ಹಳೆಯಂಗಡಿ, ಭಗವತಿ ಫ್ರೆಂಡ್ಸ್ ಸಸಿಹಿತ್ಲು ಶ್ರೀ ಭಗವತಿ ಯುನೈಟೆಡ್ ಫ್ರೆಂಡ್ಸ್ ಕದಿಕೆ, ಹಳೆಯಂಗಡಿ, ಯಶಸ್ವಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ(ರಿ) ಹಳೆಯಂಗಡಿ, ಚೇಳಾಯರು ವಿವೇಕಾನಂದ ಯುವಕ ಮಂಡಲ,ತೋಕೂರು ಫೇಮಸ್ ಯೂತ್ ಕ್ಲಬ್ ಮತ್ತು ಮಹಿಳಾ ಮಂಡಲ, ಸುಬ್ರಹ್ಮಣ್ಯ ಸ್ಪೋರ್ಟ್ಸ್ ಕ್ಲಬ್ ,ಚೇಳಾಯರು ಈಶ್ವರಾನಂದ ಭಜನಾ ಮಂದಿರ,ಹಳೆಯಂಗಡಿ ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ. ಪಾವಂಜೆ, ಓಂ ಕ್ರಿಕೇಟರ್ಸ್‌ , ಸಾಗರ ಸಾಗ್ ಕ್ರಿಕೇಟರ್ಸ್ ಸಾಗ್, ಇಂದಿರಾ ನಗರ ಸಂಗಮ ಮಹಿಳಾ ಮಂಡಲದ ಸಹಯೋಗದಲ್ಲಿ
 ಕಟೀಲಿನ ದುರ್ಗಾ ಸಂಜೀವನಿ ಮಣಿಪಾಲ್‌ ಆಸ್ಪತ್ರೆಯ ಸಹಕಾರದೊಂದಿಗೆ ಮೇ 20 ರ  ಬುಧವಾರದಂದು   ಹಳೆಯಂಗಡಿಯ  ಹರಿ ಓಂ ಕಟ್ಟಡದ ಆವರಣದಲ್ಲಿ ಕಟೀಲು ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಶಿವಾನಂದ ಪ್ರಭು  ನೇತೃತ್ವದಲ್ಲಿ ಉಚಿತ ಆರೋಗ್ಯ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ  ಅಶಕ್ತ ಮಹಿಳೆಯರಿಗೆ ಹೊಲಿಗೆ ಯಂತ್ರ  ಹಸ್ತಾಂತರ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. 
ಶಿಬಿರವನ್ನು ದ.ಕ.ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧಕ ಎಚ್. ಎನ್ ರಮೇಶ್ ಉದ್ಘಾಟಿಸಿ ಮಾತನಾಡಿ ಸೊಸೈಟಿಯ ಸಮಾಜಮುಖಿ ಕಾರ್ಯಕ್ರಮಗಳು ಅಭಿಂದನೀಯವಾಗಿದ್ದು ನಿರಂತರವಾಗಿ ನಡೆಯಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಳೆಯಂಗಡಿ
ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ  ಎಚ್ ವಸಂತ್ ಬೆರ್ನಾರ್ಡ್ ವಹಿಸಿ ಮಾತನಾಡಿದರು. 
ಮುಖ್ಯ ಅತಿಥಿಗಳಾಗಿ ಮಂಗಳೂರು ಹೋಟೆಲ್ ವುಡ್ ಸೈಡ್ ಮಹಾಪ್ರಬಂಧಕ ಎಚ್. ಭಾಸ್ಕರ್ ಸಾಲ್ಯಾನ್,ತಾ ಪಂ ಮಾಜೀ ಸದಸ್ಯ  ಮನ್ಸೂರ್ ಸಾಗ್ ,ಮುಲ್ಕಿ ಬ್ಲಾಕ್ ಕಾಂಗ್ರೇಸ್  ಅಧ್ಯಕ್ಷ ಮೋಹನ್ ಕೋಟ್ಯಾನ್, ಮುಲ್ಕಿ ನ ಪಂ ಮಾಜೀ ಉಪಾಧ್ಯಕ್ಷೆ  ರಾಧಿಕ ಕೋಟ್ಯಾನ್ ,ಹಳೆಯಂಗಡಿ ಪ್ರಿಯದರ್ಶಿನಿ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷ  ವಸಂತ್ ಬೆರ್ನಾಡ್,ಉಪಾಧ್ಯಕ್ಷ  ವಿಜಯ ಕುಮಾರ್ ಸನಿಲ್ , ನಿರ್ದೇಶಕರಾದ ಉಮಾನಾಥ ಜೆ ಶೆಟ್ಟಿಗಾರ್,ಧನಂಜಯ ಮಟ್ಟು, ಗೌತಮ್ ಜೈನ್, ಗಣೇಶ್ ಪ್ರಸಾದ್ ದೇವಾಡಿಗ, ಜೈ ಕೃಷ್ಣ ಕೋಟ್ಯಾನ್, ಡಾ. ಶೆರಿಲ್ ಅಯೋನ, ರೇಖಾ ಶೆಟ್ಟಿ,ಹರೀಶ್ ಎನ್ ಪುತ್ರನ್, ನವೀನ್ ಸಾಲ್ಯಾನ್ ಪಂಜ, ಮೋಹನ್ ದಾಸ್, ಅನಿಲ್ ಪೂಜಾರಿ ಸಸಿಹಿತ್ಲು, ರಜಿಯಾ ಭಾನು, ಕರಿಯ ಕಾಡಿಗ ಮತ್ತಿತರರು ಉಪಸ್ಥಿತರಿದ್ದರು 
ಶಿಬಿರದಲ್ಲಿ  ತಜ್ಞ ವೈದ್ಯರಾದ 
ಡಾ. ನಿತ್ಯಾನಂದ ಚೌಟ, ಡಾ. ಸುಧೀಂದ್ರ ಕಾರ್ನಾಡ್ ,ಡಾ ಕೀರ್ತನ್ ರಾವ್. ಡಾ. ಉಣ್ಣಿ ಕೃಷ್ಣನ್ ನೈನಾ‌ರ್, ಡಾ. ಸಂಗೀತ ಭಟ್  ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು 
ಕಟೀಲು ದುರ್ಗಾ ಸಂಜೀವಿನಿ ಆಸ್ಪತ್ರೆಯ ವೈದ್ಯಕೀಯ ಶಿಬಿರದ ಪ್ರಬಂಧಕ ನಿತೇಶ್ ಶೆಟ್ಟಿ ಎಕ್ಕಾರು ಮಾಹಿತಿ ನೀಡಿದರು 
 ಸ್ವಸಹಾಯ ಸಂಘಗಳ ಪ್ರೇರಕಿ ನೀತು ನಿರಂಜಲ ಪ್ರಾರ್ಥಿಸಿದರು 
ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾಡ್ ಸ್ವಾಗತಿಸಿದರು,,ಸೊಸೈಟಿ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್  ಧನ್ಯವಾದ ಅರ್ಪಿಸಿದರು, ಶಾಖಾ ಪ್ರಭಂದಕರೂಗಳಾದ  ಅಭಿಷ್ಟ ಜೈನ್ ಮತ್ತು ಪ್ರಜ್ಞಶ್ರೀ ನಿರೂಪಿಸಿದರು.
ಶಿಬಿರದಲ್ಲಿ ಇಸಿಜಿ ಸೇವೆ, ಶುಗರ್ ಮತ್ತು ಬಿ ಪಿ ಪರೀಕ್ಷೆ, ಕನ್ನಡಕ ವಿತರಣೆ, ಕಣ್ಣಿನ ಶಸ್ತ್ರ ಚಿಕಿತ್ಸೆ, ಹಲ್ಲಿನ  ತಪಾಸಣೆ ನಡೆಸಲಾಯಿತು.
ಸುಮಾರು 300ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.