Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಸೂರಲ್ಪಾಡಿ ಎಸ್ಕೆಜೆಎಂ ಹಾಗೂ ಎಸ್ಕೆಎಸ್ ಬಿವಿ ನೂರುಲ್ ಉಲೂಂ ಮದ್ರಸ ಸೂರಲ್ಪಾಡಿ ಮದ್ರಸದ ವತಿಯಿಂದ ಜಲಧಿನ ಅಭಿಯಾನ ಹಾಗೂ ಪಕ್ಷಿಗಳಿಗೆ ನೀರುಣಿಸುವ ವಿಶೇಷ ಕಾರ್ಯಕ್ರಮ

ಗಂಜಿಮಠ: ಸೂರಲ್ಪಾಡಿ ಎಸ್ಕೆಜೆಎಂ ಹಾಗೂ ಎಸ್ಕೆಎಸ್ ಬಿವಿ ನೂರುಲ್ ಉಲೂಂ ಮದ್ರಸ ಸೂರಲ್ಪಾಡಿ ಮದ್ರಸದ ವತಿಯಿಂದ ಜಲಧಿನ ಅಭಿಯಾನ ಹಾಗೂ ಪಕ್ಷಿಗಳಿಗೆ ನೀರುಣಿಸುವ ವಿಶೇಷ ಕಾರ್ಯಕ್ರಮವು ಸೋಮವಾರ ಬೆಳಗ್ಗೆ ಸುರಲ್ಪಾಡಿ ಮದ್ರಸ ವಠಾರದಲ್ಲಿ ಜರುಗಿತು.

ಸೂರಲ್ಪಾಡಿ ಜುಮಾ ಮಸೀದಿಯ ಮುದ್ರರಿಸ್ ಕೆ.ಎಸ್.‌ ಹೈದರ್ ದಾರಿಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ಕೆಎಸ್ ಬಿವಿ ರೇಂಜ್ ಅಧ್ಯಕ್ಷರಾದ ಬಿ.ಎಚ್. ಮುಹಮ್ಮದ್ ಮುಸ್ತಫಾ ಹನೀಫಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸೂರಲ್ಪಾಡಿ ಜುಮಾ ಮಸೀದಿಯ ಖತೀಬ್ ಸ್ವಪ್ವಾನ್ ಇರ್ಫಾನಿ ದುಆ ನೆರೆವೇರಿಸಿದರು.

ಮಸೀದಿ ಉಪಧ್ಯಾಕ್ಷ ಅಬ್ದುರ್ರಹ್ಮಾನ್ ಮೂನ್‌ ಲೈಟ್‌ ಹಾಗೂ ಪ್ರಧಾನ ಕಾರ್ಯದರ್ಶಿ ಶೇಖ್ ಮುಖ್ತಾರ್ ಪಕ್ಷಿಗಳಿಗೆ ನೀರು‌ ಉಣಿಸಿದರು. ರೇಂಜ್ ಕಾರ್ಯದರ್ಶಿ ಇಲ್ಯಾಸ್ ನಿಝಾಮಿ , ಎಸ್ ಬಿ ವಿ ಕನ್ವೀನರ್ ಸಮೀಮ್ ಫೈಝಿ, ಸಿದ್ದೀಖ್ ದಾರಿಮಿ, ಫಾರೂಕ್ ಯಮಾನಿ‌, ಝಕರಿಯ ದಾರಿಮಿ, ಹನೀಫ್ ಯಮಾನಿ, ಲತೀಫ್ ಫೈಝಿ, ಹಸನ್ ಇಕ್ಬಾಲ್, ಊರಿನ ಹಿರಿಯರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.