Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮಹಾತ್ಮ ಗಾಂಧಿ ಬೊಂದೇಲ್ ಅಂಗನವಾಡಿ ಕಟ್ಟಡ ನಿರ್ಮಾಣಕ್ಕಾಗಿ 2024-25ನೇ ಸಾಲಿನ ನಗರ ಯೋಜನೆಯ ಅಡಿಯಲ್ಲಿ 20 ಲಕ್ಷ ರೂ. ಅನುದಾನದ ಶಿಲಾನ್ಯಾಸ ಕಾರ್ಯಕ್ರಮ

ಮಂಗಳೂರು:ಮಂಗಳೂರು ನಗರ ಶಿಶು ಅಭಿವೃದ್ಧಿ ಯೋಜನೆಯಡಿ, ಮಹಾತ್ಮ ಗಾಂಧಿ ಬೊಂದೇಲ್ ಅಂಗನವಾಡಿ ಕಟ್ಟಡ ನಿರ್ಮಾಣಕ್ಕಾಗಿ 2024-25ನೇ ಸಾಲಿನ ನಗರ ಯೋಜನೆಯ ಅಡಿಯಲ್ಲಿ 20 ಲಕ್ಷ ರೂ. ಅನುದಾನದ ಶಿಲಾನ್ಯಾಸ ಕಾರ್ಯಕ್ರಮವನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿಯವರು ಬೊಂದೇಲ್ ಕಂಬ್ಳ ಅಶ್ವತ್ಥ ಕಟ್ಟೆ ಸಮೀಪದ ಪಿಡಬ್ಲುಡಿ  ಕಚೇರಿ ಮುಂಭಾಗದಲ್ಲಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಯೋಜನಾಧಿಕಾರಿ ಶ್ರೀಮತಿ ಶ್ವೇತಾ ಎನ್., ಶ್ರೀ ಸಂದೀಪ್, ಭೂ ನ್ಯಾಯ ಮಂಡಳಿಯ ಮಾಜಿ ಸದಸ್ಯ ಹಾಗೂ ಪ್ರಮುಖರಾದ ಶ್ರೀ ಶಿವಾಜಿ ಕುಲಾಲ್, ಶ್ರೀ ರವೀಂದ್ರ ನಾಯ್ಕ್, ಅಂಗನವಾಡಿ ಪ್ರಮುಖರು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.