Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಜೃಂಭಣೆಯ ಹಗಲು ರಥೋತ್ಸವ

ಮುಲ್ಕಿ:ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 
ವರ್ಷಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಶ್ರೀ ದೇವರ ಹಗಲು ರಥೋತ್ಸವ ವಿಜೃಂಭಣೆಯಿಂದ ನಡೆಯಿತು. 
ದಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಕ್ಷೇತ್ರದ ತಂತ್ರಿಗಳಾದ  ವೇದಮೂರ್ತಿ ನರಹರಿ ತಂತ್ರಿಗಳ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ವಿವಿಧ ವಾದ್ಯಗೋಷಗಳೊಂದಿಗೆ  ಪಲ್ಲಕ್ಕಿಯಲ್ಲಿ ಶ್ರೀ ದೇವರು ರಥಾರೋಹಣಕ್ಕೆ ತೆರಳಿ ಹಗಲು ರಥೋತ್ಸವ ವಿಜೃಂಭಣೆಯಿಂದ ನಡೆಯಿತು  ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ,ರಾತ್ರಿ ಶ್ರೀ ದೇವರ ಉತ್ಸವ ಬಲಿ, ಭೂತಬಲಿ, ಕವಾಟ ಬಂಧನ  ನಡೆಯಿತು
ಈ ಸಂದರ್ಭ ಅರ್ಚಕ ಶ್ರೀನಾಗಭಟ್, ಪವಿತ್ರ ಪಾಣಿ ಸುನಿಲ್ ಭಟ್ ತಾಳಿಪಾಡಿ, ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಕ್ಷೇತ್ರದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ,ಸುಂದರ ಶೆಟ್ಟಿ
ತಾಳಿಪಾಡಿ ಗುತ್ತು,,
 ಸುಕುಮಾರ ಶೆಟ್ಟಿ ತಾಳಿಪಾಡಿ ಗುತ್ತು,ಎಳತ್ತೂರು- ತಾಳಿಪಾಡಿ ಗ್ರಾಮಸ್ಥರು. ಮತ್ತಿತರರು ಉಪಸ್ಥಿತರಿದ್ದರು
ಕ್ಷೇತ್ರದಲ್ಲಿ ಮಂಗಳವಾರ ಬೆಳಿಗ್ಗೆ ಕವಾಟೋದ್ಘಾಟನೆ, ಪ್ರಸಾದ ವಿತರಣೆ, ತುಲಾ ಭಾರ ಸೇವೆ,ರಾತ್ರಿ ಮಹಾ ರಥೋತ್ಸವ, ಸುಡುಮದ್ದು ಪ್ರದರ್ಶನ, ಧ್ವಜಾವರೋಹಣ ನಡೆಯಲಿದೆ