ಎ 17:ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಸ್ವಾಭಿಮಾನಿ ಪ್ರೊ.ಕೃಷ್ಣಪ್ಪ ಬಣ ಗ್ರಾಮ ಶಾಖೆ ಎಕ್ಕಾರು ಮಂಗಳೂರು ಇವರ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಅರ್ ಅಂಬೇಡ್ಕರ್ ರವರ 135 ನೇ ಜನ್ಮದಿನಾಚರಣೆ ಕಾರ್ಯಕ್ರಮ
ಬಜಪೆ:ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಸ್ವಾಭಿಮಾನಿ ಪ್ರೊ.ಕೃಷ್ಣಪ್ಪ ಬಣ ಗ್ರಾಮ ಶಾಖೆ ಎಕ್ಕಾರು ಮಂಗಳೂರು ಇವರ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಅರ್ ಅಂಬೇಡ್ಕರ್ ರವರ 135 ನೇ ಜನ್ಮದಿನಾಚರಣೆ ಕಾರ್ಯಕ್ರಮವು ಎ.17 ರ ಶುಕ್ರವಾರದಂದು ಎಕ್ಕಾರು ಗ್ರಾಮ ಪಂಚಾಯತ್ ನ ಮೈದಾನದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.ಕಾರ್ಯಕ್ರಮದ ಅಂಗವಾಗಿ ಸಂಜೆ 6 ರಿಂದ ಅಂಗನವಾಡಿ ಪುಟಾಣಿಗಳು,ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.ರಾತ್ರಿ 8 ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಚಿಂತಕಿ ಹಾಗೂ ಲೇಖಕಿ ಡಾ.ನಿಕೇತನ ಕುಂದಾಪುರ ಅವರು ಉದ್ಘಾಟಿಸಲಿದ್ದಾರೆ.ದ.ಸಂ.ಸ ಗ್ರಾಮ ಶಾಖೆ ಎಕ್ಕಾರು ಇದರ ಗ್ರಾಮ ಸಂಚಾಲಕ ಗಣೇಶ್ ಕೆಂಚಗುಡ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೆ.ಅಭಯ ಚಂದ್ರ ಜೈನ್ ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ ರೈ,ಸಹಕಾರ ರತ್ನ ಮೋನಪ್ಪಶೆಟ್ಟಿ ಎಕ್ಕಾರು,ಎಕ್ಕಾರು ಶ್ರೀಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರ ಮನೆ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವ ಉದ್ಯಮಿ ರೊನಾಲ್ಡ್ ಫೆರ್ನಾಂಡಿಸ್,ಕಟೀಲು - ಎಕ್ಕಾರು ಲಯನ್ಸ್ ಕ್ಲಬ್ ಅಧ್ಯಕ್ಷ ಶೇಖರ್ ಶೆಟ್ಟಿ,ಬಜಪೆ ಠಾಣಿಯ ಆರಕ್ಷಕ ನಿರೀಕ್ಷಕ ಎಚ್.ಎನ್ ಬಾಲಕೃಷ್ಣ,ದ.ಸಂ.ಸ ಜಿಲ್ಲಾ ಶಾಖೆ ಸಂಚಾಲಕ ಸದಾಶಿವ ಪಡುಬಿದ್ರಿ,ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ,ದ.ಕ ದಲಿತ ನೌಕರರ ಒಕ್ಕೂಟದ ಜಿಲ್ಲಾ ಉಸ್ತುವಾರಿ ಎಚ್.ಡಿ ಲೋಹಿತ್,ದ.ಸಂ.ಸ ತಾಲೂಕು ಶಾಖೆಯ ಸಂಚಾಲಕ ರಾಘವೇಂದ್ರ ಎಸ್.ಪೇಜಾವರ,ಪಿಡಬ್ಲುಡಿ ಗುತ್ತಿಗೆದಾರ ವಿ.ಕಣ್ಣನ್,ಯುವ ಉದ್ಯಮಿ ಚಂದ್ರಹಾಸ ಟಿ.ಅಮೀನ್ ಕಾವೂರು ಗಾಂಧಿನಗರ,ಪರಿವರ್ತನ ಕೋ ಅಪರೇಟಿವ್ ಸೊಸೈಟಿಯ ಬಜ್ಪೆ ಮಂಗಳೂರು ಅಧ್ಯಕ್ಷ ಕೃಷ್ಣಾನಂದ ಡಿ,ದ.ಸಂ.ಸ ಗ್ರಾಮ ಶಾಖೆ ಎಕ್ಕಾರು ಮಹಿಳಾ ಸಂಚಾಲಕಿ ಶ್ರೀಮತಿ ಸೌಮ್ಯ ಸುರೇಶ್ ಹಾಗೂ ಮೊದಲಾದವರು ಉಪಸ್ಥಿತಲಿದ್ದಾರೆ.
ರಾತ್ರಿ 10:30 ರಿಂದ ಚೈತನ್ಯ ಕಲಾವಿದರು ಬೈಲೂರು ,ಪ್ರಸನ್ನ ಶೆಟ್ಟಿಬೈಲೂರು ಸಾರಥ್ಯ ಕಥೆ ನಿರ್ದೇಶನದ ರಾಘು ಮಾಸ್ಟ್ರು ಹಾಸ್ಯಮಯ ತುಳು ನಾಟಕ ಪ್ರದರ್ಶನ ವಾಗಲಿದೆ.