Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಎಸ್.ಎಸ್.ಎಲ್.ಸಿ ಪರೀಕ್ಷೇಯಲ್ಲಿ ಪ್ರಥಮ ಶ್ರೇಣಿ,ದ.ಸಂ.ಸ ಗ್ರಾಮ ಶಾಖೆ ಎಕ್ಕಾರು ವತಿಯಿಂದ ಅಭಿನಂದನೆ

ಬಜಪೆ:2025-26 ನೇ ಸಾಲಿನ ಎಸ್ ಎಸ್ ಎಲ್ ಸಿ  ಪರೀಕ್ಷೆಯಲ್ಲಿ  ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು ಇಲ್ಲಿನ ವಿದ್ಯಾರ್ಥಿಗಳಾದ ಕು. ಕೃತಿಕಾ  ಕೆಂಚಗುಡ್ಡೆ (508)ಮಂಜುಳಾ ಅವರ ಪುತ್ರಿ  ಕು.ರೇಷ್ಮಾ. ಕೆ. (502 )ಕರ್ಣ ಮತ್ತು ಯಶೋಧ ದಂಪತಿಯ ಪುತ್ರಿ ಯಾಗಿದ್ದು,  ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ ರಾಗಿದ್ದಾರೆ.ಕಡು  ಬಡತನವನ್ನು ಮೀರಿ ಉತ್ತಮ ಸಾಧನೆಯನ್ನು ಮಾಡಿ, ತನ್ನ ಶಾಲೆ ಹಾಗೂ ಊರಿನ ಗೌರವವನ್ನು ಹೆಚ್ಚಿಸಿದ ವಿದ್ಯಾರ್ಥಿಗಳನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ ) ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ ಬಣ ಎಕ್ಕಾರು ಗ್ರಾಮ ಶಾಖೆಯ ವತಿಯಿಂದ ಅಭಿನಂದಿಸಿದರು.. ಈ ಸಂದರ್ಭದಲ್ಲಿ ದ.ಸಂ.ಸ ಜಿಲ್ಲಾ ಸಂಘಟನಾ ಸಂಚಾಲಕ  ರಘು. ಕೆ. ಎಕ್ಕಾರು, ಗ್ರಾಮ ಸಂಚಾಲಕ  ಗಣೇಶ್ ಕೆಂಚಗುಡ್ಡೆ, ಮಹಿಳಾ ಸಂಚಾಲಕಿ ಸೌಮ್ಯ ಸುರೇಶ್, ಎಕ್ಕಾರು ಗ್ರಾಮ ಪಂಚಾಯತ್ ಗ್ರಂಥಾಲಯದ ಗ್ರಂಥ ಪಾಲಕಿ ಶ್ರೀಮತಿ ಹೇಮಲತಾ ಶರ್ಮಾ, ದ.ಸಂ.ಸ ಮಂಗಳೂರು ತಾಲೂಕು ಸಂಘಟನಾ ಸಂಚಾಲಕ ಕೃಷ್ಣ.ಕೆ, ಗ್ರಾಮ ಪದಾಧಿಕಾರಿಗಳಾದ ಪರಮೇಶ್ವರ, ವಾಸು, ಸುದರ್ಶನ್, ಮಂಜುನಾಥ, ಸುರೇಶ್,ಪುರುಷೋತ್ತಮ, ಯಮುನಾ, ಸಂಧ್ಯಾ ವಾಸು, ಜಯಂತಿ ಗಣೇಶ್, ಉದಯ, ಕರ್ಣ, ಮಂಜುಳಾ , ವಿನೋದ ಕರ್ಣ, ವಿಜಯಾ ವಸಂತ ಹಾಗೂ ಮತ್ತಿತರರು ಉಪಸ್ಥಿತರಿದ್ದರು.