ರಾಜ್ಯ ಹೆದ್ದಾರಿಗೆ ಬಿದ್ದ ಮರ,ಸಂಚಾರ ಅಸ್ತವ್ಯಸ್ತ
ಬಜಪೆ:ಮರವೊಂದು ರಾಜ್ಯ ಹೆದ್ದಾರಿಗೆ ಬಿದ್ದ ಘಟನೆ ಕಟೀಲು - ಬಜಪೆ ರಾಜ್ಯ ಹೆದ್ದಾರಿ 67 ರ ಎಕ್ಕಾರು ದುರ್ಗಾನಗರ ಬಳಿ ಆದಿತ್ಯವಾರ ನಡೆದಿದೆ.
ಕಟೀಲು - ಬಜಪೆ ರಾಜ್ಯ ಹೆದ್ದಾರಿಯಂಚಿನಲ್ಲಿ ಅಮೃತ್ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಾಗಿ ಹೆದ್ದಾರಿಯಂಚನ್ನು ಅವೈಜ್ಞಾನಿಕ ರೀತಿಯಲ್ಲಿ ಅಗೆದು ಕಾಮಗಾರಿಗಳನ್ನು ನಡೆಸಲಾಗಿದ್ದು,ಹೆದ್ದಾರಿಯಂಚಿನ ಮಣ್ಣು ಸಡೀಲಗೊಂಡು ಮರ ಹೆದ್ದಾರಿಗೆ ಬೀಳಲು ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮರ ಹೆದ್ದಾರಿಗೆ ಬೀಳುವ ವೇಳೆಯಲ್ಲಿ ಇಬ್ಬರು ದ್ವಿಚಕ್ರವಾಹನಗಳ ಸವಾರರು ಗಳು ಸಂಚರಿಸಿದ್ದು,ಮರ ವಿದ್ಯುತ್ ತಂತಿಯ ಮೇಲೆ ಬಿದ್ದು ಸವಾರರುಗಳು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಹೆದ್ದಾರಿಗೆ ಮರ ಬಿದ್ದ ಸಂದರ್ಭ ಪೆರ್ಮುದೆ --ಹುಣ್ಸೆಕಟ್ಟೆ - ಎಕ್ಕಾರು - ಕಟೀಲು ರಸ್ತೆಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.ಸ್ಥಳಕ್ಕೆ ಬಜಪೆ ಪೊಲೀಸರು ಭೇಟಿ ನೀಡಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಯನ್ನು ಮಾಡಿದ್ದಾರೆ.
ಟೀಮ್ ದುರ್ಗಾನಗರದ ಯುವಕರ ತಂಡ ಹಾಗೂ ಸ್ಥಳೀಯರು ಕೂಡಲೇ ಕಾರ್ಯಪ್ರವೈತ್ತರಾಗಿ ಹೆದ್ದಾರಿಗೆ ಬಿದ್ದ ಮರವನ್ನು ತೆರವುಗೊಳಿಸಿದ್ದಾರೆ.