Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಎ.25:ಡಿ.ಸಿ.ಸಿ ಕ್ಲಬ್ (ರಿ) ಹಾಗೂ ಶ್ರೀದುರ್ಗಾ ಮಹಿಳಾ ಮಂಡಳಿ ಎಕ್ಕಾರು ಇವರ ಜಂಟಿ ಆಶ್ರಯದಲ್ಲಿ 20 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

ಎಕ್ಕಾರು:ದುರ್ಗಾ ಕಲ್ಚರಲ್ & ಕ್ರಿಕೆಟ್ ಕ್ಲಬ್ (ಡಿ.ಸಿ.ಸಿ) ಹಾಗೂ ಶ್ರೀ ದುರ್ಗಾ ಮಹಿಳಾ ಮಂಡಳಿ ಎಕ್ಕಾರು ಇವರ ಜಂಟಿ ಆಶ್ರಯದಲ್ಲಿ ಎ.25 ರ ಶನಿವಾರ ಸಂಜೆ 6:30 ರಿಂದ ಎಕ್ಕಾರು ತಾಂಗಾಡಿ ಕಟ್ಟೆಯಲ್ಲಿ ಡಾ.ಪದ್ಮನಾಭ ಭಟ್  ರವರ ನೇತೃತ್ವದಲ್ಲಿ  20 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.ಸಂಜೆ 6 ರಿಂದ ದುರ್ಗಾ ಬಾಲಗೋಕುಲ ಮಕ್ಕಳಿಂದ ಕುಣಿತ ಭಜನೆ  ಹಾಗೂ ಪೂಜೆಯ ನಂತರ ಅನ್ನಸಂತರ್ಪಣೆಯ ನಡೆಯಲಿದೆ.