Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ತಿರುವೈಲು : ಶಾಸಕ ಡಾ. ಭರತ್ ಶೆಟ್ಟಿಯವರಿಂದ 1 ಕೋಟಿ 35 ಲಕ್ಷ ರೂಪಾಯಿ ಮೊತ್ತದ ಅಭಿವೃದ್ಧಿ ಕಾರ್ಯದ ಉದ್ಘಾಟನೆ

ಮಂಗಳೂರು:ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 20 ನೇ ತಿರುವೈಲು ವಾರ್ಡಿನ ಅಮೃತನಗರ ಮುಖ್ಯರಸ್ತೆಯ ನೀರು ಹರಿದು ಹೋಗುವ ಚರಂಡಿ ನಿರ್ಮಾಣ ಹಾಗೂ ವೆಟ್ ವೆಲ್ ಬಳಿ ಚರಂಡಿ ಕಾಮಗಾರಿಗಳು ಸುಮಾರು ₹135 ಲಕ್ಷ ಅನುದಾನದಲ್ಲಿ ಪೂರ್ಣಗೊಂಡಿದ್ದು, ಬುಧವಾರದಂದು  ಅಭಿವೃದ್ಧಿ ಕಾರ್ಯವನ್ನು ಮಂಗಳೂರು ಉತ್ತರ ಕ್ಷೇತ್ರದ  ಶಾಸಕ  ಡಾ. ವೈ. ಭರತ್ ಶೆಟ್ಟಿಯವರು ಉದ್ಘಾಟಿಸಿದರು.

ಈ ಸಂದರ್ಭ ಸ್ಥಳೀಯ ನಿಕಟಪೂರ್ವ ಕಾರ್ಪೊರೇಟರ್ ಶ್ರೀಮತಿ ಹೇಮಲತಾ ರಘು ಸಾಲಿಯನ್, ಬೂತ್ 158 ಅಧ್ಯಕ್ಷ ಪ್ರಣಮ್ ಶೆಟ್ಟಿ, ಕಾರ್ಯದರ್ಶಿ ಅನಿಶ್ ರಾವ್, ಪೌರ ಸಮಿತಿ ಅಧ್ಯಕ್ಷ ಬಾಲಕೃಷ್ಣ, ಗೌರವಾಧ್ಯಕ್ಷ ವಿಠಲ ಸಾಲಿಯಾನ್, ಉಪಾಧ್ಯಕ್ಷ ವಿಕ್ಟರ್ ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

ಈ ಕಾಮಗಾರಿಯು ನೀರು ನಿಲುವಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವುದರೊಂದಿಗೆ, ಸಾರ್ವಜನಿಕರಿಗೆ ಉತ್ತಮ ಮೂಲಸೌಕರ್ಯ ಕಲ್ಪಿಸುವ ಮಹತ್ವದ ಹೆಜ್ಜೆಯಾಗಿದೆ.