Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಎಸ್.ಎಸ್.ಎಲ್.ಸಿ ಯಲ್ಲಿ ತೋಕೂರಿನ ದಿಗಂತ್ ಎಸ್ .ಶೆಟ್ಟಿ 6 ನೇ ರ್‍ಯಾಂಕ್

ಹಳೆಯಂಗಡಿ: 2025 -26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ  ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠ,ಕಿಲ್ಪಾಡಿ,ಮೂಲ್ಕಿ ಇಲ್ಲಿನ ವಿದ್ಯಾರ್ಥಿ ದಿಗಂತ್ ಎಸ್.ಶೆಟ್ಟಿ ಇವರು 99.2℅ ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ 6 ನೇ ರ್‍ಯಾಂಕ್ ಪಡೆದು  ಹಳೆಯಂಗಡಿ ಸಮೀಪದ  ತೋಕೂರು  ಗ್ರಾಮದ ಹೆಸರನ್ನು ರಾಜ್ಯಕ್ಕೆ ಪಸರಿಸಿದ್ದಾರೆ.ಇವರು ಹಳೆಯಂಗಡಿಯ ತೋಕೂರು  ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ನ  ಅಧ್ಯಕ್ಷ,ಮಾಗಂದಡಿ ಮನೆತನದ ಸುರೇಶ್ ಶೆಟ್ಟಿ ಹಾಗೂ  ಮಹಿಳಾ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀಮತಿ ಉಷಾ.ಎಸ್ ಶೆಟ್ಟಿ ದಂಪತಿಗಳ ಪುತ್ರರಾಗಿದ್ದಾರೆ.ರ್‍ಯಾಂಕ್ ಪಡೆದ ದಿಗಂತ್ ಶೆಟ್ಟಿ ವರಿಗೆ   ತೋಕೂರಿನ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ನ  ಗೌರವಾಧ್ಯಕ್ಷರು, ಅಧ್ಯಕ್ಷರು, ಕಾರ್ಯದರ್ಶಿ, ಸರ್ವ ಸದಸ್ಯರು, ಮಹಿಳಾ ಘಟಕದ ಸದಸ್ಯರುಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.