Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಪಿಯುಸಿ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳು , ಶಾಸಕ ಡಾ.ಭರತ್ ಶೆಟ್ಟಿಯವರಿಂದ ಅಭಿನಂದನೆ

ಸುರತ್ಕಲ್ :ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸುರತ್ಕಲ್ ಹೊಸಬೆಟ್ಟು ನಿವಾಸಿಗಳಾದ ಸುರೇಶ್ ಕರ್ಕೇರ ಶಕುಂತಲಾ ದಂಪತಿಗಳ ಅವಳಿ ಪುತ್ರಿಯರು ವೈಭವಿ ಎಸ್ ಕರ್ಕೇರ ಪಿಯುಸಿ ಪರೀಕ್ಷೆಯಲ್ಲಿ 2 ನೇ ರ‍್ಯಾಂಕ್ ( 598 ) ಹಾಗೂ ವೈಷ್ಣವಿ ಎಸ್ ಕರ್ಕೇರ 10 ನೇ ರ‍್ಯಾಂಕ್ ( 590 ) ಪಡೆದಿದ್ದಾರೆ.
ಇಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ  ಶಾಸಕ  ಡಾ.ವೈ ಭರತ್ ಶೆಟ್ಟಿ ಅವರು ವಿದ್ಯಾರ್ಥಿನಿಯರ ನಿವಾಸಕ್ಕೆ ತೆರಳಿ ಅಭಿನಂದಿಸಿ, ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.

ಈ ಸಂದರ್ಭ, ಗಂಗಾಧರ ಗುರಿಕಾರ ಹೊಸಬೆಟ್ಟು ,ಹೊಸಬೆಟ್ಟು ವೀರ ಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷ  ಶರತ್ ಎಲ್ ಕರ್ಕೇರ,,  ಮಹಾ ಶಕ್ತಿಕೇಂದ್ರ ಅಧ್ಯಕ್ಷ  ದಿನಕರ್ ಇಡ್ಯಾ, ಸುನೀಲ್ ಕುಳಾಯಿ, ಮಂಡಲ ಕಾರ್ಯದರ್ಶಿ ಪುಷ್ಪರಾಜ್ ಮುಕ್ಕ ನಿಕಟ ಪೂರ್ವ ಮನಪಾ ಸದಸ್ಯರಾದ ಶೋಭಾ ರಾಜೇಶ್, ಶ್ವೇತಾ ಪೂಜಾರಿ, ನಯನ ಕೋಟ್ಯಾನ್, ವಾರ್ಡ್ ಅಧ್ಯಕ್ಷ  ರಾಜೇಶ್ ಮುಕ್ಕ, ಕಾರ್ಯದರ್ಶಿ ಅನಂತ್ ರಾಜ್, ಪಕ್ಷದ ಕಾರ್ಯಕರ್ತರು ಇದ್ದರು.